ಬೆಳಗಾವಿ: ಭಾರತ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷ ಆಗಿದೆ. ಆದರೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ RSS ಕಚೇರಿ ಮೇಲೆಯೇ ಭಾರತದ ಬಾವುಟ ಹಾರಿಸಿಲ್ಲ ಎಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪ್ರತಿಯೊಂದನ್ನು ರಾಜಕೀಯವಾಗಿ ನೋಡಲು ಬರಲ್ಲ. 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ರಾಜಕಾರಣದಿಂದ ನೋಡುವುದಿಲ್ಲ. ರಾಜಕೀಯೇತರವಾಗಿ ನೋಡುತ್ತೇನೆ. ರಾಷ್ಟ್ರಪತಿಯಾಗಿ ದಲಿತ ಮಹಿಳೆ ಗೆದ್ದಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ದೇಶದ ಪ್ರಥಮ ಪ್ರಜೆ ಆಗಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದರು. ಇದನ್ನೂ ಓದಿ: ಮೋದಿ-ಯೋಗಿಗೆ ಕುಟುಂಬವಿಲ್ಲ, ಆದರೆ ನಮಗಿದೆ: ಉಮೇಶ್ ಕತ್ತಿ
Advertisement
Advertisement
ಸಿದ್ದರಾಮೋತ್ಸವದ ಬಗ್ಗೆ ಮಾತನಾಡಿದ ಹೆಬ್ಬಾಳ್ಕರ್, ಇದು ರಾಜಕೀಯ ಕಾರ್ಯಕ್ರಮ ಎನ್ನುವುದಕ್ಕಿಂತ ಪಕ್ಷದ ಅಭಿಮಾನಿಗಳು, ಸಿದ್ದರಾಮಯ್ಯನವರ ಅಭಿಮಾನಿಗಳು ಸೇರಿಕೊಂಡು ಮಾಡುತ್ತಿರುವ ಕಾರ್ಯಕ್ರಮ. ಸಿದ್ದರಾಮಯ್ಯ ಅಮೃತ ಮಹೋತ್ಸವ ರಾಜಕಾರಣ ಮಾಡೋದಕ್ಕಲ್ಲ. ಸಿದ್ದರಾಮಯ್ಯ ಸಾಹೇಬರಿಗೆ 75 ವರ್ಷ ಆಗಿದೆ. ಅದರಲ್ಲಿ 40 ವರ್ಷ ರಾಜಕಾರಣದಲ್ಲೇ ಕಳೆದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಬೆಳಗಾವಿಯಿಂದ 50 ಸಾವಿರ ಜನರು ಹೋಗುತ್ತಾರೆ ಎಂದರು. ಇದನ್ನೂ ಓದಿ: ಟಾಕಳೆ ವಿರುದ್ಧ ಕೈ ಕಾರ್ಯಕರ್ತೆ ಅತ್ಯಾಚಾರ ಆರೋಪ – ನವ್ಯಶ್ರೀ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸ್