– ನಾಲ್ಕು ಗ್ರಾಮಗಳಲ್ಲಿ ವೈದ್ಯರ ತಂಡದಿಂದ ನಿರಂತರ ತಪಾಸಣೆ
ರಾಯಚೂರು: ಜಿಲ್ಲೆಯ ಕೃಷ್ಣಾನದಿ ತೀರದ ಗ್ರಾಮಗಳ ಜನ ಕಲುಷಿತ ನೀರನ್ನ ಬಳಸಿ ವಿವಿಧ ಚರ್ಮರೋಗಗಳಿಗೆ ತುತ್ತಾಗುತ್ತಿರುವ ಕುರಿತ ಪಬ್ಲಿಕ್ ಟಿವಿ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕಳೆದ ಮೂರು ದಿನಗಳಿಂದ ರಾಯಚೂರು ತಾಲೂಕಿನ ಆತ್ಕೂರು, ಡಿ.ರಾಂಪೂರ್, ಬೂರ್ದಿಪಾಡ್, ಸರ್ಜಾಪುರ ಗ್ರಾಮಗಳಲ್ಲಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ.
Advertisement
ನದಿ ತೀರದ ಗ್ರಾಮಗಳ ಜನರ ಚರ್ಮರೋಗಕ್ಕೆ ಕೃಷ್ಣನದಿ ನೀರು ಹಾಗೂ ಬಿಸಿಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ನದಿಯಲ್ಲಿನ ನಿಂತ ನೀರಲ್ಲಿ ಹೆಚ್ಚಾಗಿರುವ ಫಂಗಸ್‍ನಿಂದಾಗಿ ಚರ್ಮರೋಗಗಳು ಕಾಣಿಸಿಕೊಂಡಿವೆ. ಹೀಗಾಗಿ ವೈದ್ಯರು ಆಂಟಿ ಫಂಗಲ್, ಆಂಟಿ ಸ್ಟೆಮಿ ಮಾತ್ರೆ ಹಾಗು ಮುಲಾಮುಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ನೀರನ್ನ ಶುದ್ಧೀಕರಿಸಿ ಬಳಸುವಂತೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ.
Advertisement
ಹೆಚ್ಚು ಕಾಲ ನಿಂತ ನೀರನ್ನ ಬಳಸುವುದಿರಿಂದ ವಾಂತಿ, ಬೇಧಿ, ಅತೀಸಾರದಂತಹ ಕಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಮಾದರಿಗಳನ್ನ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಯಲಕ್ಕೆ ಕಳುಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ನದಿ ನೀರನ್ನ ಶುದ್ಧಿಕರಿಸುವಂತೆ ಜಿಲ್ಲಾ ಆರೋಗ್ಯ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಗೆ ನೀರನ್ನ ಶುದ್ದಿಕರಿಸಿ ಕೊಳಾಯಿಗೆ ಬಿಡುವಂತೆ ಸೂಚಿಸಿದ್ದು, ನೀರಿನ ಕ್ಲೋರಿನೇಷನ್ ನಡೆದಿದೆ.
Advertisement
Advertisement
ಪಬ್ಲಿಕ್ ಟಿವಿ ವರದಿಗೆ ಕೂಡಲೇ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಿದೆ. ಗ್ರಾಮಗಳಿಗೆ ಶುದ್ಧ ನೀರಿನ ಸರಬರಾಜು ಮಾಡುವ ಅಗತ್ಯವಿದೆ.