ಬೆಳಗಾವಿ: ಗೃಹ ಸಚಿವರು ಅರ್ಧ ಜ್ಞಾನೇಂದ್ರ. ಫುಲ್ ಜ್ಞಾನ ಇದ್ದಿದ್ರೆ ಕಷ್ಟ ಇರಲಿಲ್ಲ. ಆದರೆ ಅರ್ಧ ಜ್ಞಾನ ಇಟ್ಟುಕೊಂಡು ಇಂತಹ ಕೆಲಸಗಳನ್ನ ಮಾಡಿಕೊಂಡು ಹೋಗುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಯೂಥ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಇರುವವರೇ ಹಗರಣ ಮಾಡಿದ್ದಾರೆ. 56 ಸಾವಿರ ಯುವಕರ ಜೀವನದ ಜೊತೆಗೆ ಆಟವಾಡಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಮಾನ, ಮರ್ಯಾದೆ, ಬೇಜಾರು ಜನಪರವಾದ ಕಾಳಜಿ ಇದ್ದರೆ ಇದನ್ನ ಹೇಗೆ ಬಗೆ ಹರಿಸುತ್ತಾರೆ ನೋಡಬೇಕು. ಇದರಲ್ಲಿ ಕಷ್ಟಪಟ್ಟು ಬರೆದವರು ಇರುತ್ತಾರೆ. ಪರೀಕ್ಷೆ ಬರೆದ ಎಲ್ಲರಿಗೂ ನೀವು ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ?-ಪ್ರತಾಪ್ ಸಿಂಹಗೆ ನಲಪಾಡ್ ತಿರುಗೇಟು
ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು. ಅವರು ಗೃಹ ಸಚಿವರಾಗಲು ಅಸಮರ್ಥ, ಅವರು ಇರಲೇಬಾರದು.ಪೊಲೀಸರನ್ನು ಲೀಡ್ ಮಾಡಲು ನಂಬರ್ ಒನ್ ಮಿನಿಸ್ಟರ್ ಬೇಕು, ಇಂತಹ ಅರ್ಧದವರು ಆಗಲ್ಲಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಮೊಹಮ್ಮದ್ ನಲಪಾಡ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ: ಪ್ರಮೋದ್ ಮುತಾಲಿಕ್