ಕೇಪ್‍ಟೌನ್: ಮೊಹಮ್ಮದ್ ಸಿರಾಜ್ (Mohammed Siraj) ಅವರ ಅಬ್ಬರದ ಬೌಲಿಂಗ್ ದಾಳಿಗೆ ಆತಿಥೇಯ ದಕ್ಷಿಣ ಆಫ್ರಿಕಾ (South Africa) ತಂಡ, ಟೀಂ ಇಂಡಿಯಾ (Team India) ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‍ನಲ್ಲಿ 55 ರನ್‍ಗೆ ಅಲೌಟ್ ಆಗಿದೆ.
ಮೊದಲ ಪಂದ್ಯದಲ್ಲಿ 32 ರನ್ ಅಂತರದ ಜಯ ಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಸಿರಾಜ್ ಬೌಲಿಂಗ್ ಭಾರೀ ಆಘಾತ ಉಂಟು ಮಾಡಿದೆ. ಇದನ್ನೂ ಓದಿ: ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ
Advertisement
ಇನಿಂಗ್ಸ್ ಆರಂಭಿಸಿದ ಏಡನ್ ಮರ್ಕರಂ (2) ಹಾಗೂ ಡೀನ್ ಎಲ್ಗರ್ (4) ಅವರನ್ನು ತಂಡದ ಮೊತ್ತ ಒಂದಂಕಿಯಲ್ಲಿರುವಾಗಲೇ ಸಿರಾಜ್ ಔಟ್ ಮಾಡಿದರು. ನಂತರ ಬಂದ ಟ್ರಸ್ಟನ್ ಸ್ಟಬ್‍ಗೆ (3) ಜಸ್‍ಪ್ರಿತ್ ಬೂಮ್ರಾ ಪೆವಿಲಿಯನ್‍ಗೆ ಮರಳಿ ಕಳುಹಿಸಿದರು. ಬಳಿಕ ಮತ್ತಷ್ಟು ಅಬ್ಬರಿಸಿದ ಸಿರಾಜ್, ಟೋನಿ ಡಿ ಝಾರ್ಜಿ (2), ಡೇವಿಡ್ ಬೆಡಿಂಗ್ಹ್ಯಾಮ್ (12), ಕೈಲ್ ವೆರೆಯನ್ (15) ಮತ್ತು ಮಾರ್ಕೊ ಯಾನ್ಸೆನ್ (0) ಅವರ ವಿಕೆಟ್‍ಗಳನ್ನು ನಿರಂತರವಾಗಿ ಉರುಳಿಸಿದರು. ಈ ಮೂಲಕ ಟೀಂ ಇಂಡಿಯಾ ಮೇಲುಗೈ ಸಾಧಿಸಿತು.
Advertisement
Advertisement
ಸಿರಾಜ್ ಕೇವಲ 15 ರನ್ ನೀಡಿ ಆರು ವಿಕೆಟ್ ಪಡೆದರು. ವೃತ್ತಿ ಜೀನವದಲ್ಲಿ ಎರಡನೇ ಟೆಸ್ಟ್ ಆಡುತ್ತಿರುವ ಮುಕೇಶ್ ಕುಮಾರ್ ಹಾಗೂ ಬೂಮ್ರಾ ತಲಾ ಎರಡು ವಿಕೆಟ್ ಪಡೆದರು. ಇದರೊಂದಿಗೆ ಆತಿಥೇಯರ ಆಟ ಕೇವಲ 23.2 ಓವರ್‍ಗಳಲ್ಲಿ ಅಂತ್ಯ ಕಂಡಿದೆ.
Advertisement
ಭಾರತ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಆರ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಶಾರ್ದೂಲ್ ಠಾಕೂರ್ ಬದಲಿಗೆ ಮುಖೇಶ್ ಕುಮಾರ್‌ಗೆ ಸ್ಥಾನ ನೀಡಲಾಗಿದೆ.
ಅಂತೆಯೇ ಆಫ್ರಿಕಾ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಟೆಂಬಾ ಬವುಮಾ ಬದಲಿಗೆ ಟ್ರಿಸ್ಟಾನ್ ಸ್ಟಬ್ಸ್ ಸ್ಥಾನ ಪಡೆದಿದ್ದು, ಇದು ಅವರ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ. ಎನ್‍ಗಿಡಿ ಗಾಯಗೊಂಡಿರುವ ಕಾರಣ ಕೋಟ್‍ಜೀ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಸ್ಪಿನ್ನರ್ ಮಹಾರಾಜ್ ಕೂಡ ತಂಡದಲ್ಲಿದ್ದಾರೆ.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್.
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾಕ್ರ್ರಾಮ್, ಟೋನಿ ಡಿ ಜೊರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ನಾಂದ್ರೆ ಬರ್ಗರ್, ಲುಂಗಿ ಎನ್ಗಿಡಿ. ಇದನ್ನೂ ಓದಿ: ವಿಶ್ವಕಪ್ ಸೋತ ಬಳಿಕ ಬೇಸರ ಹೊರಹಾಕಿದ್ದ ಕೊಹ್ಲಿಯ ವಿಡಿಯೋ ವೈರಲ್