ಮಡಿಕೇರಿ: ಕೊಡಗಿನ ಗಡಿಭಾಗ ಕುಶಾಲನಗರದಲ್ಲಿ ಐತಿಹಾಸಿಕ ಗಣಪತಿ ದೇವಸ್ಥಾನದ (Ganapathi Temple) 105ನೇ ವರ್ಷದ ಬ್ರಹ್ಮರಥೋತ್ಸವ (Brahmarathotsava) ನಡೆಯಿತು. ಅಭಿಜಿನ್ ಲಗ್ನದಲ್ಲಿ ಆರಂಭವಾದ ಗಣಪತಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಬಾಳೆಹಣ್ಣು, ಜವನ, ಎಸೆದು ಭಕ್ತಿಭಾವ ಮೆರೆದರು.
ಇದಕ್ಕೂ ಮೊದಲು ದೇವಾಲಯದ ಒಳಾಂಗಣದಿಂದ ಬೆಳ್ಳಿ ಗಣಪತಿ ಉತ್ಸವ ಮೂರ್ತಿಯನ್ನ ಹೊರಗೆ ತರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಗಣಪತಿ ಬಪ್ಪಾ ಮೋರಿಯಾ ಎಂದು ಕೂಗಿ ಹರ್ಷೋದ್ಘಾರ ಮೆರೆದರು. ಅಲ್ಲದೇ ದೇವಾಲಯ ಮುಂಭಾಗ ನೂರಾರು ಯುವಕರು ಓಂ ಆಕಾರದಲ್ಲಿ ಕರ್ಪೂರ ಹಚ್ಚಿ ಗಣೇಶನ ಸ್ತೋತ್ರ ಪಠಿಸಿದ್ರು. ಇದನ್ನೂ ಓದಿ: ಬೆಂಗಳೂರು-ಎರ್ನಾಕುಲಂ ಸೇರಿ ನಾಲ್ಕು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಮೋದಿ
ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ಆರಂಭವಾದ ರಥೋತ್ಸವಕ್ಕೆ ಸಾವಿರಾರು ಭಕ್ತರು, ಈಡುಗಾಯಿ ಹೊಡೆದು ತಮ್ಮ ಇಷ್ಟಾರ್ಥಗಳು ಫಲಿಸಲೆಂದು ಪ್ರಾರ್ಥಿಸಿದ್ರು. ಇದನ್ನೂ ಓದಿ: ಆಳಂದದಲ್ಲಿ ಮತಗಳ್ಳತನಕ್ಕೆ ಬಿಹಾರ, ಜಾರ್ಖಂಡ್, ದೆಹಲಿ ರಾಜ್ಯಗಳ ಫೋನ್ ನಂಬರ್ ಬಳಕೆ: ಡಿಕೆಶಿ ಬಾಂಬ್
ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಆಂಜನೇಯ ದೇವಾಲಯದವರೆಗೆ ಸಾವಿರಾರು ಭಕ್ತರು ರಥ ಎಳೆದು ಭಕ್ತಿಮೆರೆದ್ರು. ಈ ಬ್ರಹ್ಮರಥೋತ್ಸವಕ್ಕೆ ನೆರೆಯ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತ ಗಣ ವಿಘ್ನೇಶ್ವರನನ್ನ ಆರಾಧಿಸಿದ್ರು. ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ನೇತೃತ್ವದಲ್ಲಿ ರಥೋತ್ಸವ ನೆರೆವೇರಿತು. ಇದನ್ನೂ ಓದಿ: ಡಿ.1ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ – ಸರ್ಕಾರದ ಪ್ರಸ್ತಾವನೆಗೆ ರಾಷ್ಟ್ರಪತಿ ಮುರ್ಮು ಅನುಮೋದನೆ




