ಕಾರವಾರ: ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಳಿಯಾಳ (Haliyala) ಶಾಸಕ ಆರ್.ವಿ.ದೇಶಪಾಂಡೆ (R V Deshpande) ಹೇಳಿದರು.
ದಾಂಡೇಲಿಯಲ್ಲಿ (Dandeli) ಪ್ರಾದೇಶಿಕ ಸಾರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ (Free Bus) ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಏನೇ ಆದರೂ ಹೈಕಮಾಂಡ್ ತೀರ್ಮಾನವೆ ಅಂತಿಮ: ಹೆಚ್.ಸಿ ಮಹದೇವಪ್ಪ
- Advertisement -
- Advertisement -
ಎಲ್ಲರಿಗೂ ಉಚಿತವಾಗಿ ನೀಡುತ್ತಾ ಹೋದರೆ ಸಾರಿಗೆ ಸಂಸ್ಥೆ ನಡೆಸುವುದು ಕಷ್ಟವಾಗಬಹುದು. ಮುಂದೆ ಉಚಿತ ಯೋಜನೆ ಅಪಾಯಕಾರಿಯಾಗಬಹುದು. ಉಚಿತ ಯೋಜನೆಗಳನ್ನ ಉಳ್ಳವರು ಬಳಸಬಾರದು ಎಂದು ಹೇಳಿದರು.