ಬೆಂಗಳೂರು: ಕರಸೇವಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಇದು ನಾಚಿಕೆಗೇಡು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತು ಅಯೋಧ್ಯೆ (Ayodhya) ಉದ್ಘಾಟನೆ ಬಗ್ಗೆ ದೇಶದಲ್ಲಿ ಚರ್ಚೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಸರ್ಕಾರಕ್ಕೆ ಇದ್ಯಾವುದರ ಕಾಳಜಿ ಇಲ್ಲ. ಇಂತಹ ವಿಷಯ ಮುನ್ನಲೆಗೆ ತಂದು ವಿಷಯ ಡೈವರ್ಟ್ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣ ದೊಡ್ಡದು ಮಾಡಿದ್ದಾರೆ. ಎಲ್ಲಾ ಕೇಸ್ ಖುಲಾಸೆ ಆಗಿದೆ. ಮಾಧ್ಯಮಗಳೇ ಇದನ್ನ ತೋರಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕರ ‘ನನ್ನನ್ನೂ ಬಂಧಿಸಿ’ ಪೋಸ್ಟರ್ ಅಭಿಯಾನಕ್ಕೆ ಕಾಂಗ್ರೆಸ್ ಠಕ್ಕರ್
ಕರಸೇವಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡ್ತಿದೆ. ಈದ್ಗಾ ಮೈದಾನದಲ್ಲಿ ಗಲಾಟೆ ಆಗಿದ್ದಾಗ ದೇವೇಗೌಡರು ಹೇಗೆ ನಿಭಾಯಿಸಿದರು ಅಂತಾ ಗೊತ್ತಿದೆ. ಈ ಸರ್ಕಾರ ವಿರೋಧಿಗಳ ಮೇಲೆ ದಬ್ಬಾಳಿಕೆ ಮಾಡೋ ಕೆಲಸ ಮಾಡ್ತಿದೆ ಎಂದು ಟೀಕಿಸಿದರು.
ಪ್ರತಾಪ್ ಸಿಂಹ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ. ಕಾಂಗ್ರೆಸ್ ಅವರು ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕರಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರಸೇವಕರ ಮೇಲೆ ಪ್ರಕರಣಗಳು ಬಾಕಿ ಇವೆ ಎಂದ ಸಿಎಂನ್ನು ಶ್ರೀರಾಮ ಕ್ಷಮಿಸಲ್ಲ: ಅಶೋಕ್ ಕಿಡಿ
ಅಧಿಕಾರ ದುರುಪಯೋಗ, ಸುಳ್ಳು ಕೇಸ್ ಮೂಲಕ ಕರಸೇವಕರ ಬಂಧನ ವಿಚಾರವಾಗಿ ಸಿಎಂ, ಗೃಹ ಸಚಿವರು ಅದನ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ. ಹರಿಪ್ರಸಾದ್ ಗೋಧ್ರಾ ರೀತಿ ಆಗುತ್ತೆ ಅಂತಾ ಹೇಳಿದ್ದಾರೆ. ಪರ-ವಿರೋಧ ಎರಡು ಕಡೆ ನಡೆಯುತ್ತಿದೆ. ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ತಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು, ಸಂಘಟನೆಗಳ ಮತ್ತು ವ್ಯಕ್ತಿಗಳ ಮೇಲೆ ಕೇಸ್ ಹಾಕುತ್ತಿದ್ದು, ಅಧಿಕಾರ ದುರುಪಯೋಗ ಆಗ್ತಿದೆ. ಇದಕ್ಕೆ ಬಿಜೆಪಿ ಪ್ರತಿಭಟನೆ ಪ್ರಾರಂಭ ಮಾಡಿದೆ ಎಂದು ಹೇಳಿದರು.
ದೇವೇಗೌಡರು ರಾಜ್ಯದ ರೈತರಿಗೆ ಆಗಿರೋ ಅನ್ಯಾಯದ ಬಗ್ಗೆ ಮಾತಾಡಿದ್ದಾರೆ. ಸದನ ಸಮಿತಿ ವರದಿ ನಮ್ಮ ಮುಂದೆ ಇದೆ. ಆದರೂ ಸರ್ಕಾರ ಅಕ್ರಮ ತಡೆಯೋದ್ರಲ್ಲಿ ಕ್ರಮವಹಿಸಿಲ್ಲ. ಕಳೆದ 2-3 ದಿನಗಳಿಂದ ರಾಜ್ಯ ಸರ್ಕಾರದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಮಾಧ್ಯಮಗಳಲ್ಲೂ ಸಹ ಬೇರೆ ಯಾವುದೇ ವಿಷಯಗಳಿಗೆ ಗಮನ ಕೊಡೋಕೆ ಆಗ್ತಿಲ್ಲ. ಕಾರಣ ಹುಬ್ಬಳ್ಳಿ ಘಟನೆ. 30 ವರ್ಷದ ಕೇಸ್‌ನಲ್ಲಿ ಕರಸೇವಕನ ಬಂಧನ ಆಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಮ್ಮ ಸ್ನೇಹಿತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ವಿದ್ಯುತ್ ದರ ಏರಿಕೆಗೆ ಕೆಇಆರ್‌ಸಿ ಚಿಂತನೆ