ದಳಪತಿ ವಿಜಯ್ ಜೊತೆ ‘ದಿ ಗೋಟ್’ (The Goat) ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ ನಾಯರ್ (Parvati Nair) ಅವರು ಇಂದು (ಫೆ.10) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನಲ್ಲಿ ಉದ್ಯಮಿ ಅಶ್ರೀತ್ ಜೊತೆ ನಟಿ ಹಸೆಮಣೆಯೆರಿದ್ದಾರೆ. ಇದನ್ನೂ ಓದಿ:ನಮ್ಮ ಸುತ್ತ ಒಳ್ಳೆಯ ಸ್ನೇಹಿತರಿರೋದು ಮುಖ್ಯ: ಚರ್ಚೆಗೆ ಗ್ರಾಸವಾಯ್ತು ಪವಿತ್ರಾ ಗೌಡ ಪೋಸ್ಟ್
Advertisement
ಬಹುಕಾಲದ ಗೆಳೆಯ ಅಶ್ರೀತ್ (Aashrith Reddy) ಜೊತೆ ನಟಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ನಟಿಯ ಮದುವೆ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ (Allu Sirish) ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ. ಅಭಿಮಾನಿಗಳಿಂದಲೂ ಕೂಡ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Advertisement
Advertisement
ಕಳೆದ ವಾರ ನಿಶ್ಚಿತಾರ್ಥ ಫೋಟೋ ಹಂಚಿಕೊಂಡು ಮದುವೆ ಆಗುತ್ತಿರೋದಾಗಿ ರಿವೀಲ್ ಮಾಡಿದ್ದರು. ಸದ್ಯ ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ತಾವು ಎಂಗೇಜ್ ಆಗಿರೋದಾಗಿ ಪಾರ್ವತಿ ಅಧಿಕೃತವಾಗಿ ತಿಳಿಸಿದ್ದರು. ಇದನ್ನೂ ಓದಿ:ವಿಕ್ಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ರಶ್ಮಿಕಾ ಮಂದಣ್ಣ ಭೇಟಿ
Advertisement
ಅಂದಹಾಗೆ, ಪಾರ್ವತಿ ನಾಯರ್ ಅವರು ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಕನ್ನಡದ ಸ್ಟೋರಿ ಕಥೆ, ಕಿಶೋರ್ ನಟನೆಯ ‘ವಾಸ್ಕೋಡಿಗಾಮ’ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ಫೆ.7ರಂದು ತೆರೆಕಂಡ ‘ಮಿಸ್ಟರ್.ರಾಣಿ’ (Mr.Rani Kannada) ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ‘ಲಕ್ಷ್ಮಿ ನಿವಾಸ’ ನಟ ದೀಪಕ್ ಜೊತೆ ತೆರೆ ಹಂಚಿಕೊಂಡಿದ್ದಾರೆ.