ಬೆಂಗಳೂರು: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ (Electric Bus) ಮಾಡುವ ಗುರಿ ಇದೆ ಎಂದು ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
Advertisement
ಇಂದಿನ ವಿಧಾನಸಭಾ ಕಲಾಪದಲ್ಲಿ ಈಕೋ ಸಿಸ್ಟಮ್ ತರಲು ಸಮಿತಿ ಮಾಡಲಾಗಿತ್ತು. ಎಲೆಕ್ಟ್ರಿಕ್ ಬಸ್ ಬಳಕೆ ಕಡಿಮೆಯಾಗ್ತಿದೆ ಅಂತಾ ಶಾಸಕ ತನ್ವೀರ್ ಸೇಠ್ (Tanveer Sait) ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಾಮುಲು (Sri Ramulu), ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ (Smart City) ಅಡಿ 90ಎಲೆಕ್ಟ್ರಿಕ್ ಬಸ್ ಕಾಂಟ್ರಾಕ್ಟ್ ಗೆ ಪಡೆಯಲಾಗಿದೆ. ಇದು 12ವರ್ಷ ಕಾಂಟ್ರಾಕ್ಟ್ ಇರಲಿದೆ. ನಮ್ಮಿಂದ ಕೇವಲ ಕಂಡಕ್ಟರ್ ಮಾತ್ರ ಇರುತ್ತಾರೆ ಎಂದರು.
Advertisement
Advertisement
ಡ್ರೈವರ್, ಬಸ್ ಮೇಂಟೆನೆನ್ಸ್ ಎಲ್ಲವೂ ಅವರದ್ದಾಗಿದೆ. ಕೇಂದ್ರ ಸರ್ಕಾರದ ಫಿನ್-2 ಮೂಲಕ 300 ಬಸ್ ಖರೀದಿ ಮಾಡಿದ್ದೇವೆ. ಇದರಲ್ಲಿ 75 ಬಸ್ ಮಾತ್ರ ಬಂದಿವೆ. ಉಳಿದ ಬಸ್ ಬಂದ ಬಳಿಕ ಅವನ್ನೂ ಬಳಕೆ ಮಾಡಿಕೊಳ್ಳುತ್ತೇವೆ. ಅದೇ ರೀತಿ 921 ಎಲೆಕ್ಟ್ರಿಕ್ ಬಸ್ ಸಿಇಎಸ್‍ಎಲ್ (CESL) ಮೂಲಕ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ
Advertisement
ಎಲೆಕ್ಟ್ರಿಕ್ ಬಸ್ ಸಂಚಾರವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕೆಲಸ ಆಗಲಿದೆ. ಡೀಸಲ್ ಬೆಲೆ ಹೆಚ್ಚಳವಾಗಿದ್ರಿಂದ ನಮಗೆ ನಷ್ಟವಾಗಿದೆ, ಎಲೆಕ್ಟ್ರಿಕ್ ಬಸ್ ಗಳಿಂದ ಮುಂದೆ ಲಾಭದಾಯಕ ಆಗಬಹುದು ಎಂದು ಶ್ರೀರಾಮುಲು ಅಭಿಪ್ರಾಯ ವ್ಯಕ್ತಪಡಿಸಿದರು.