ದೇವಸ್ಥಾನಕ್ಕೆ ಮಹಿಳೆಯರು ಯಾವ ರೀತಿ ಬರಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪಾಠ ಮಾಡಿದ್ದಾರೆ. ದೇವಸ್ಥಾನಕ್ಕೆ ಹುಡುಗಿಯೊಬ್ಬಳು ತುಂಡುಡುಗೆ ಧರಿಸಿಕೊಂಡು ಬಂದಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ದೇವಸ್ಥಾನಕ್ಕೆ (Temple) ಬರುವಾಗ ಸಭ್ಯ ರೀತಿಯ ಬಟ್ಟೆಗಳನ್ನು (Costume) ಧರಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.
ತುಂಡುಡುಗೆ ಧರಿಸಿಕೊಂಡು ದೇವಸ್ಥಾನಕ್ಕೆ ಬರುವವರನ್ನು ಮೂರ್ಖರು ಎಂದು ಜರಿದಿರುವ ಕಂಗನಾ, ಧಾರ್ಮಿಕ ಸ್ಥಳಕ್ಕೆ ಬರುವವರ ವೇಷಭೂಷಣದ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದರ ಜೊತೆಗೆ ವ್ಯಾಟಿಕನ್ ಗೆ ಹೋಗಿದ್ದಾಗ ತಮಗಾದ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ.ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
‘ನಾನು ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ವ್ಯಾಟಿಕನ್ ಸಿಟಿಗೆ ಹೋಗಿದ್ದೆ. ನನಗೆ ಆವರಣದ ಒಳಗೂ ಬಿಡಲಿಲ್ಲ. ನಂತರ ಹೋಟೆಲ್ ವೊಂದಕ್ಕೆ ಹೋಗಿ ಬಟ್ಟೆ ಬದಲಿಸಿಕೊಂಡು ಹೋಗಬೇಕಾಯಿತು’ ಎಂದಿದ್ದಾರೆ ಕಂಗನಾ. ರಾತ್ರಿ ಧರಿಸುವಂತ ಬಟ್ಟೆಗಳನ್ನು ಸೋಮಾರಿಗಳು ಎಲ್ಲಲ್ಲೂ ಬಳಸುತ್ತಾರೆ ಎಂದು ಟೀಕಿಸಿದ್ದಾರೆ.
ದೇವಸ್ಥಾನದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿಕೊಂಡು ಬರಬೇಕು ಎನ್ನುವ ಅರಿವು ಕೂಡ ಜನರಿಗೆ ಇರಬೇಕು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೆನಪಿಸಿಕೊಂಡು ಅದಕ್ಕೆ ಒಪ್ಪಬಹುದಾದ ಬಟ್ಟೆಗಳನ್ನು ಧರಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.