ಲಂಡನ್: ಪಾಕ್ (Pakistan) ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ (England) ತಂಡಕ್ಕೆ ಆಘಾತ ಎದುರಾಗಿದೆ.
ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಪಾಕ್ ಪ್ರವಾಸದಲ್ಲಿದ್ದ ಅರ್ಧದಷ್ಟು ಆಟಗಾರರು ಹೆಸರಿಲ್ಲದ ವೈರಸ್‌ಗೆ (Virus) ತುತ್ತಾಗಿದ್ದಾರೆ. ಆದ್ದರಿಂದ ಟೆಸ್ಟ್ ಸರಣಿ ಮುಂದೂಡುವ ಸಾಧ್ಯತೆಯಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚಿಸುತ್ತಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬುಧವಾರ ತಿಳಿಸಿದೆ.
Advertisement
Advertisement
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ನಡೆಸುತ್ತಿದೆ. ಸ್ಟೋಕ್ಸ್ಗೆ ಚೇತರಿಕೊಳ್ಳಲು ಸಮಾಯವಾಕಾಶ ನೀಡಲು ನಿರ್ಧರಿಸಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದೆ.
Advertisement
ಇಂಗ್ಲೆಂಡ್ ತಂಡದ ನಾಯಕ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಹಲವು ಆಟಗಾರರು, ಸಹ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಅವರ ವಿಶ್ರಾಂತಿಗಾಗಿ ಹೋಟೆಲ್‌ನಲ್ಲಿ (Hotel) ಉಳಿಯಲು ಸಲಹೆ ನೀಡಲಾಗಿದೆ. ಅವರಿಗೆ ಫುಡ್‌ಪಾಯಿಸನ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್
Advertisement
ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಇಂಗ್ಲೆಂಡ್-ಪಾಕ್ (Pakistan) ವಿರುದ್ಧ 4-3 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಇದೀಗ 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಟೆಸ್ಟ್ ಪ್ರವಾಸ ಕೈಗೊಂಡಿದೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
ಡಿಸೆಂಬರ್ 1 ರಿಂದ 5ರ ವರೆಗೆ ಮೊದಲ ಟೆಸ್ಟ್, ಡಿ.9 ರಿಂದ 13ರ ವರೆಗೆ 2ನೇ ಟೆಸ್ಟ್ ಹಾಗೂ ಡಿ.17 ರಿಂದ 21ರ ವರೆಗೆ 3ನೇ ಟೆಸ್ಟ್ ಪಂದ್ಯಗಳು ನಿಗದಿಯಾಗಿದ್ದವು.