Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

Cinema

ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

Public TV
Last updated: February 3, 2024 5:38 pm
Public TV
Share
2 Min Read
Naguva Hugala Mele 3
SHARE

ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸಾ ಆವೇಗವೊಂದರ ಪರ್ವ ಕಾಲ ಶುರುವಾಗಿ ಒಂದಷ್ಟು ವರ್ಷಗಳು ಕಳೆದಿವೆ. ಈಗ ಎಲ್ಲರ ಗಮನವಿರುವುದು ಹೊಸ ವರ್ಷವನ್ನು ಯಾವೆಲ್ಲ ಬಗೆಯ ಸಿನಿಮಾಗಳು ಕಳೆಗಟ್ಟಿಸಲಿವೆಯೆಂಬ ಪುಳಕದಂತಹ ನಿರೀಕ್ಷೆ ಮಾತ್ರ. ಆ ದೃಷ್ಟಿಯಲ್ಲಿ ಒಂದಷ್ಟು ಕಣ್ಣಾಡಿಸಿದರೆ ಕೆಲವಾರು ಸಿನಿಮಾಗಳು ಗಮನ ಸೆಳೆಯುತ್ತವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ.

Naguva Hugala Mele 1

ಈಗಾಗಲೇ ಹಾಡುಗಳೂ ಸೇರಿದಂತೆ ನಾನಾ ರೀತಿಯಲ್ಲಿ ಸಂಚಲನ ಸೃಷ್ಟಿಸಿರುವ ಈ ಚಿತ್ರ, ಇದೇ ಫೆಬ್ರವರಿ 9ರಂದು ತೆರೆಗಾಣುತ್ತಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಸಿನಿಮಾ ಅಂದರೆ, ಬೇರೆಯದ್ದೇ ದಿಕ್ಕಿನಲ್ಲಿ ಕೌತುಕ ಮುಡೋದು ಸಹಜ. ಯಾಕೆಂದರೆ, ನಿರ್ದೇಶಕನಾಗಿ ಇದುವರೆಗಿನ ನಡಿಗೆಯಲ್ಲಿಯೇ ಅವರು ಅಂಥದ್ದೊಂದು ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ತಮ್ಮ ಇದುವರೆಗಿನ ಯಾನದಲ್ಲೇ ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ ಮಹತ್ತರವಾದ ಅನುಭೂತಿಯೊಂದನ್ನು ಮೊಗೆದು ಕೊಡಲು ವೆಂಕಟ್ ಭಾರದ್ವಾಜ್ ತಯಾರಾದಂತಿದೆ.

Naguva Hugala Mele 4

ಇಲ್ಲಿರೋದು ಪರಿಶುದ್ಧ ಪ್ರೇಮದ ನಾನಾ ಮಜಲುಗಳನ್ನು ತೆರೆದಿಡುವ ವಿಶಿಷ್ಟ ಕಥಾನಕ. ಪರಿಶುದ್ಧವಾದ, ಪ್ರಾಮಾಣಿಕವಾದ ಪ್ರೇಮವೆಂಬುದು ಯಾವತ್ತಿದ್ದರೂ ಪ್ರಕೃತಿಗೆ ಹತ್ತಿರವಾದದ್ದು. ಅದನ್ನು ಕೃತಕವಾದವುಗಳಿಂದ ಸಿಂಗರಿಸುವ ಯಾವ ದರ್ದೂ ಇಲ್ಲ. ಒಂದು ವೇಳೆ ಸಿಂಗರಿಸಿದರೂ ಕೂಡಾ ಅದು ಪ್ರೇಮವೆಂಬ ಅಸಲೀ ಹೊಳಪಿನ ಮುಂದೆ ಮಂಕಾಗುತ್ತದೆ. ಈ ಸೂಕ್ಷ್ಮವನ್ನು ಅರಿತಿರುವ ವೆಂಕಟ್ ಭಾರದ್ವಾಜ್, ಅತ್ಯಂತ ಸಹಜವಾಗಿ ಈ ಸಿನಿಮಾವನ್ನು ದೃಶ್ಯೀಕರಿಸಿದ್ದಾರೆ.

Naguva Hugala Mele 2

ಸಾಮಾನ್ಯವಾಗಿ, ಯಾವುದೇ ಸಿನಿಮಾಗಳಿಗೆ ದೃಶ್ಯ ರೂಪ ಕೊಡುವಾಗಲ ದುಬಾರಿ ಸೆಟ್ಟುಗಳತ್ತ ಗಮನ ಹರಿಸಲಾಗುತ್ತೆ. ಅದರ ಮೇಲೆಯೇ ಸಿನಿಮಾವೊಂದರ ಕಿಮ್ಮತ್ತನ್ನು ಅಳೆಯುವ ಮಾನದಂಡಗಳೂ ಇವೆ. ಆದರೆ, ವೆಂಕಟ್ ಭಾರದ್ವಾಜ್ ಸೆಟ್ಟುಗಳ ಗೊಡವೆಯಿಲ್ಲದೆ, ಸಹಜ ಸುಂದರವಾದ ತಾಣಗಳಲ್ಲಿ ಇಲ್ಲಿನ ದೃಶ್ಯಗಳನ್ನು ರೂಪಿಸಿದ್ದಾರಂತೆ. ಕಣ್ಣಿಗೆ ಹಬ್ಬವೆನಿಸುವಂಥಾ, ಕಥೆಗೆ ಪೂರಕವಾಗಿ, ಒಮ್ಮೊಮ್ಮೆ ದೃಶ್ಯಗಳೇ ಕಥೆಯಾಗುವಂತಹ ಕಲಾವಂತಿಕೆಯಿಂದ ಈ ಚಿತ್ರವನ್ನು ರೂಪಿಸಿರುವ ಖುಷಿ ನಿರ್ದೇಶಕರಲ್ಲಿದೆ. ಇಲ್ಲಿ ದೃಶ್ಯರೂಪ ಧರಿಸಿರುವ ಸಹಜ ಪ್ರಾಕೃತಿಕ ವೈಭವ ಕಥೆಯ ಜೊತೆ ಜೊತೆಗೇ ಪ್ರೇಕ್ಷಕರನ್ನು ಥ್ರಿಲ್ ಮಾಡಲಿದೆ ಎಂಬುದು ಚಿತ್ರತಂಡದ ಭರವಸೆ.

 

`ನಗುವಿನ ಹೂಗಳ ಮೇಲೆ’ ಚಿತ್ರ ಶೀರ್ಷಿಕೆಯಷ್ಟೇ ಮೆಲುವಾಗಿ ಪ್ರೇಕ್ಷಕರನ್ನು ತಾಕಿ, ಸಮ್ಮೋಹಕ ಗೆಲುವಿನ ಮೂಲಕ ವರ್ಷಾರಂಭಕ್ಕೊಂದು ಕಳೆ ತಂದು ಕೊಡುವ ಸಾಧ್ಯತೆಗಳಿವೆ. ಅಂದಹಾಗೆ, ಈ ಚಿತ್ರವನ್ನು ತೆಲುಗಿನ ಪ್ರಸಿದ್ದ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಹಾಗೂ ಶರಣ್ಯಾ ನಾಯಕ ನಾಯಕಿಯರು. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ `ನಗುವಿನ ಹೂಗಳ ಮೇಲೆ’ ನಳನಳಿಸಿದೆ.

TAGGED:AbhidasNaguva Hugala MeleSharanyaVenkat Bhardwajಅಭಿದಾಸ್ನಗುವಿನ ಹೂಗಳ ಮೇಲೆವೆಂಕಟ್ ಭಾರದ್ವಾಜ್ಶರಣ್ಯಾ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Amit shah
Latest

ಅಮಿತ್‌ ಶಾ ಹೆಲಿಕಾಪ್ಟರ್‌ನಲ್ಲಿ ಇಳಿಯುವಾಗ ತಾಂತ್ರಿಕ ದೋಷ – ಅಸ್ಸಾಂ ರ‍್ಯಾಲಿ ರದ್ದು

Public TV
By Public TV
8 minutes ago
amit shah
Latest

ನಾವು ಯುಸಿಸಿ ಜಾರಿಗೆ ತರುತ್ತೇವೆ.. ಆಗ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ: ಅಮಿತ್‌ ಶಾ

Public TV
By Public TV
9 minutes ago
CongressFlags1 e1613454851608
Latest

ತಮಿಳುನಾಡು ಚುನಾವಣೆಗೆ 28 ಅಭ್ಯರ್ಥಿಗಳನ್ನ ಘೋಷಿಸಿದ ಕಾಂಗ್ರೆಸ್ – ಹೊಸ ಮುಖಗಳಿಗೂ ಮಣೆ

Public TV
By Public TV
10 minutes ago
g.parameshwar
Crime

ಹುಬ್ಬಳ್ಳಿ ಪ್ರಕರಣ – ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್‌

Public TV
By Public TV
27 minutes ago
Auto Driver
Bengaluru City

ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ – ನಸುಕಿನಲ್ಲೇ ಕ್ಯೂ ನಿಂತ್ರೂ ಸಿಗ್ತಿಲ್ಲ ಆಟೋ ಗ್ಯಾಸ್

Public TV
By Public TV
43 minutes ago
INS Aridhaman
Latest

ನ್ಯೂಕ್ಲಿಯರ್ ಸಾಮರ್ಥ್ಯದ 3ನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿದಮನ್ ಭಾರತೀಯ ಸೇನೆಗೆ ಸೇರ್ಪಡೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?