ಬೆಂಗಳೂರು: 2019ರ ಜುಲೈ 9 ರಂದು ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ವಿಶ್ವಕಪ್ (World Cup) ಸೆಮಿಫೈನಲ್ (Semi-Final) ಪಂದ್ಯದಲ್ಲಿ ಎಂ.ಎಸ್ ಧೋನಿ (MS Dhoni) ಕೊನೆಯ ಕ್ಷಣದಲ್ಲಿ ರನೌಟ್‌ಗೆ ತುತ್ತಾದರು. ಈ ರನೌಟ್ ಇಡೀ ವಿಶ್ವಕಪ್ ಗೆಲ್ಲುವ ಕನಸನ್ನೇ ನುಚ್ಚುನೂರು ಮಾಡಿತ್ತು. ಕೋಟ್ಯಂತರ ಅಭಿಮಾನಿಗಳಲ್ಲೂ ನೋವುಂಟುಮಾಡಿತ್ತು. ಮೊಬೈಲ್‌ನಲ್ಲಿ ಈ ದೃಶ್ಯ ನೋಡುತ್ತಿದ್ದಂತೆ ಕೋಲ್ಕತ್ತಾದಲ್ಲಿ (Kolkata) ಕ್ರಿಕೆಟ್ ಅಭಿಮಾನಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದರು.
ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ನೆರೆದಿದ್ದ ಅಭಿಮಾನಿಗಳು ಗೆಲುವು ಟೀಂ ಇಂಡಿಯಾದ್ದೇ (India) ಎಂದು ಬೀಗುತ್ತಿದ್ದರು. ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‌ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟಿದ್ದರು. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್-ಸಚಿನ್ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್ ತಂದೆ
Advertisement
Advertisement
5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ರನ್ ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿ ಟ್ರೆಂಟ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸರೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು. ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್ – ಗುಡ್‌ಬೈ ಹೇಳಿದ ಬೌಲಿಂಗ್ ಕೋಚ್
Advertisement
ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 10 ಎಸೆತಗಳಲ್ಲಿ 25 ರನ್ ಬೇಕಿದ್ದಾಗ 48ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ 2 ರನ್ ಕದಿಯಲು ಪ್ರಯತ್ನಿಸಿದರು. ಆದ್ರೆ ಫೀಲ್ಡಿಂಗ್‌ನಲ್ಲಿದ್ದ ಮಾರ್ಟಿನ್ ಗಪ್ಟಿಲ್ ಎಸೆದ ಡೈರೆಕ್ಟ್ ವಿಕೆಟ್ ಥ್ರೋ ಗೆ ಧೋನಿ ರನೌಟ್ ಆಗಿದ್ದರು. ಈ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಅಲ್ಲದೇ ಅದು ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಆಗಿತ್ತು. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್ ರೋಹಿತ್ ಶರ್ಮಾ
Advertisement
ಅಂತಿಮವಾಗಿ ಭಾರತ 49.3 ಓವರ್‌ಗಳಿಗೆ ಆಲೌಟ್ ಆಯಿತು. ಅದು ಇಡೀ ಭಾರತೀಯರಿಗೆ ಮರೆಯದ ಘಟನೆಯಾಗಿ ಉಳಿಯಿತು. ಇದೀಗ 2023ರ ವಿಶ್ವಕಪ್ ಟೂರ್ನಿಯಲ್ಲೂ ಮತ್ತೆ ಭಾರತ ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಎಲ್ಲ ಕ್ಷಣಗಳನ್ನ ನೆನಪಿಸಿದೆ. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್ ದಾಖಲೆ ಸರಿಗಟ್ಟಿದ ಚೇಸ್ ಮಾಸ್ಟರ್
ಇದೇ ಆವೃತ್ತಿಯಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಿವೀಸ್ ನೀಡಿದ್ದ 274 ರನ್‌ಗಳ ಗುರಿ ಬೆನ್ನಟ್ಟಿ ಭಾರತ ಜಯ ಸಾಧಿಸಿತ್ತು. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮುಖವನ್ನೇ ನೋಡದ ಟೀಂ ಇಂಡಿಯಾ ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ವಿಶ್ವ ಏಕದಿನ ಕ್ರಿಕೆಟ್‌ಗೆ ಸಾಮ್ರಾಟನಾಗಲಿದೆ. ಕೋಟ್ಯಂತರ ಅಭಿಮಾನಿಗಳ ಆಶಯವೂ ಇದೇ ಆಗಿದೆ. ಇದನ್ನೂ ಓದಿ: World Cup 2023: ವಿಶ್ವದ ನಂ.1 T20 ಬ್ಯಾಟರ್‌ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ