ಚಿಕ್ಕಮಗಳೂರು: ದಟ್ಟ ಮಂಜು ಕವಿದ ವಾತಾವರಣದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ (Lorry) ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಕಳಸ ತಾಲೂಕಿನ ಬಾಳೆಹೊಳೆ ರಸ್ತೆಯ ಹಳುವಳ್ಳಿ ಸಮೀಪದ ಯಡ್ರಗೋಡು ಗ್ರಾಮದ ಬಳಿ ಘಟನೆ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸಿ: ಸಿಎಂಗೆ ತೇಜಸ್ವಿ ಸೂರ್ಯ ಮನವಿ
Advertisement
Advertisement
ಭದ್ರಾವತಿಯಿಂದ ಭರ್ತಿ ಎಲ್‌ಪಿಜಿ ಸಿಲಿಂಡರ್‌ಗಳನ್ನ (LPG Cylinder) ಹೊತ್ತ ಲಾರಿ ಕಳಸದಿಂದ ಬರುತ್ತಿತ್ತು. ಬೆಳಗ್ಗಿನ ಜಾವ 6:30ರ ಸುಮಾರಿಗೆ ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ ಪಲ್ಟಿಯಾಗಿದೆ.
Advertisement
ಅಪಘಾತದಲ್ಲಿ ಲಾರಿ ಚಾಲಕ ಆನಂದ್‌ಗೆ ಗಂಭೀರ ಗಾಯವಾಗಿ ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿ ನೂರಕ್ಕೂ ಹೆಚ್ಚು ಭರ್ತಿ ಸಿಲಿಂಡರ್‌ಗಳು ಇದ್ದವು. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗುತ್ತಿದ್ದಂತೆ ಸಿಲಿಂಡರ್‌ಗಳು ಹೊರಗಡೆ ಚೆಲ್ಲಾಪಿಲ್ಲಿಯಾಗಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
Advertisement
ಅಪಘಾತ ಸಂಭವಿಸಿದ ಕೆಲವೇ ಸಮಯದಲ್ಲಿ ಕಳಸ ತಾಲೂಕಿನ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಮೋಹನ್ ಮತ್ತೊಂದು ವಾಹನ ತಂದು ಸಿಲಿಂಡರ್‌ಗಳನ್ನ ಬೇರೆಡೆ ಸಾಗಿಸಿದರು. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ