ಮಂಡ್ಯ: ವಿಸಿ ನಾಲೆಗೆ (VC Canal) ತಡೆಗೋಡೆ ಇಲ್ಲದಿದ್ದರಿಂದ ಕಳೆದ 6 ವರ್ಷಗಳಲ್ಲಿ ನಾಲೆಗೆ ಬಿದ್ದು 46 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಎಚ್ಚೆತ್ತ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.
ವಿಸಿ ನಾಲೆ ಎಂದರೆ ರೈತರ ಭೂಮಿಗೆ ನೀರುಣಿಸುವ ಅಕ್ಷಯಪಾತ್ರೆ ಎನ್ನಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಿಂದ ಈ ನಾಲೆಯ ವ್ಯಾಪ್ತಿಯಲ್ಲಿ ನಡೆದ ಸಾಲು ಸಾಲು ದುರಂತಗಳಿಂದ ಜನರು ಇದನ್ನು ಸಾವಿನ ನಾಲೆ ಎಂದು ಕರೆಯುವಂತಾಗಿತ್ತು. ಇದನ್ನೂ ಓದಿ: ಪಾಕ್‌ನ ಬಲೂಚಿಸ್ತಾನದಲ್ಲಿ IED ಸ್ಫೋಟ – 5 ಮಂದಿ ಸಾವು
ವಿಸಿ ನಾಲೆಯ ದಡದ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬೀಳುತ್ತಿದ್ದರು. ನಾಲೆ ವ್ಯಾಪ್ತಿಯ ಡೇಂಜರ್ ಝೋನ್‌ಗಳಲ್ಲಿ ತಡೆಗೋಡೆ ಇಲ್ಲದಿರಿವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು. ಇದನ್ನೂ ಓದಿ: ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯ ಕಿರುಕುಳ ಆರೋಪ – ವ್ಯಕ್ತಿ ಆತ್ಮಹತ್ಯೆ
ಕಳೆದ ಫೆ. 3ರಂದು ಮಾಚಹಳ್ಳಿ ಸಮೀಪ ಕಾರು ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡಿ ತಡೆಗೋಡೆ ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಛಾಟಿ ಬೀಸಿತ್ತು. ಇದೀಗ ಆ ದುರಂತ ನಡೆದ 1 ತಿಂಗಳ ಒಳಗೆ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಡೇಂಜರ್ ಝೋನ್‌ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ – ಪಾರ್ಕ್ ಪ್ರವೇಶ ಶುಲ್ಕವನ್ನೂ ಬಿಡದ ಅರಣ್ಯ ಸಿಬ್ಬಂದಿ