ಬೀದರ್: ಸ್ನೇಹಿತರ ಜೊತೆ ಈಜಲು ಹೋಗಿ ಮಾಂಜ್ರಾನದಿ ಪಾಲಾಗಿದ್ದ ಯುವಕನ ಮೃತದೇಹ ತಡರಾತ್ರಿ ಪತ್ತೆಯಾಗಿದೆ.
ಪರಮೇಶ್ವರ್ ಬೋರಾಳೆ (22) ಈಜಲು ಹೋಗಿದ್ದ ಯುವಕ. ನೀರಿನಲ್ಲಿ ಮುಳಗಿ ನಿನ್ನೆ ನಾಪತ್ತೆಯಾಗಿದ್ದು ತಡರಾತ್ರಿ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಹಲವು ಗಂಟೆಗಳಿಂದ ಸತತವಾಗಿ ಶೋಧ ಕಾರ್ಯ ಮಾಡಿದ್ದು, ತಡರಾತ್ರಿ ಯುವಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು
Advertisement
Advertisement
ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಎಂ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದು ವೇಳೆ ಮೃತದೇಹ ಸಿಗದೆ ಇದ್ದಿದ್ದರೆ, ಯುವಕನ ಹುಡುಕಾಟಕ್ಕೆ ಇಂದು ಎನ್.ಡಿ.ಆರ್.ಎಫ್ ತಂಡ ಭಾಲ್ಕಿಗೆ ಬರುವ ಸಾಧ್ಯತೆ ಇತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು
Advertisement
Advertisement
ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತತ ಶೋಧ ಕಾರ್ಯ ಮಾಡಿ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.