ಹುಬ್ಬಳ್ಳಿ: ಯುವಕರು, ಯುವತಿಯರು ವಯಸ್ಸು ಮೀರುವುದರೊಳಗೆ ಮದುವೆಯಾಗಬೇಕು (Marriage) ಎಂದು ಹಿರಿಯರು ಯಾವಾಗಲೂ ಹೇಳುತ್ತಾರೆ. ಆದರೆ ಇಲ್ಲೊಂದು ಇಳಿ ವಯಸ್ಸಿನ ಜೋಡಿ (Old Couple) ಮದುವೆಯಾಗಲು ವಯಸ್ಸು ಅಡ್ಡಿಯೇ ಆಗಲ್ಲ ಎಂಬುದನ್ನು ಸಾಬೀತುಪಡಿಸಿದೆ. ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಿಕೆ ಚೌಹಾಣ್ ಹಾಗೂ ಅನಸೂಯಾ ನವಜೋಡಿಯಾಗಿ ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಹಸೆಮಣೆ ಹತ್ತಿರುವ 72 ವರ್ಷದ ಡಿಕೆ ಚೌಹಾಣ್ ಸತತ 3 ಬಾರಿ ಪಾಲಿಕೆ ಸದಸ್ಯರಾಗಿದ್ದರು. 2018ರಲ್ಲಿ ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಮೇಯರ್‌ಗೆ ಇದು 2ನೇ ಮದುವೆಯಾದರೆ, 62 ವಯಸ್ಸಿನ ಅನಸೂಯಾಗೆ ಇದು ಮೊದಲ ಮದುವೆ.
Advertisement
Advertisement
ಡಿಕೆ ಚೌಹಾಣ್ ಮೊದಲ ಪತ್ನಿ ಶಾರದಾಬಾಯಿ, ಕಳೆದ 3 ತಿಂಗಳ ಹಿಂದೆ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಹೆಂಡತಿಯ ನಿಧನದ ಬಳಿಕ ಡಿಕೆ ಚೌಹಾಣ್ ಮಾನಸಿಕವಾಗಿ ಬಹಳಷ್ಟು ಕುಗ್ಗಿದರು. ಹೀಗಾಗಿ ಅವರ ಮೂವರು ಮಕ್ಕಳು ಮತ್ತು ಆಪ್ತರು ಮತ್ತೊಂದು ಮದುವೆ ಆಗುವಂತೆ ಸಲಹೆ ನೀಡಿದ್ದರು. ಈ ಬಗ್ಗೆ ಯೋಚನೆ ಮಾಡಿದ ಚೌಹಾಣ್ ತನ್ನ ಹೆಂಡತಿಯ ಅಕ್ಕ ಅನಸೂಯ ಅವರನ್ನು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಈ ವಿಷಯ ಮನೆಯವರಿಗೂ ಹೇಳಿದ್ದಾರೆ. ಇದಕ್ಕೆ ಅವರ ಮಕ್ಕಳು, ಸೊಸೆಯಂದಿರು ಒಪ್ಪಿಗೆ ಕೊಟ್ಟಿದ್ದಾರೆ. ಇದನ್ನೂ ಓದಿ: ರೈತರ ಅಹೋರಾತ್ರಿ ಧರಣಿಗೆ ಸುಮಲತಾ ಅಂಬರೀಶ್ ಬೆಂಬಲ
Advertisement
Advertisement
ಅನಸೂಯಾ ಅವರಿಗೆ 62 ವಯಸ್ಸಾಗಿದ್ದರು ಇನ್ನೂ ಮದುವೆ ಆಗಿರಲಿಲ್ಲ. ಚೌಹಾಣ್ ಅವರೊಂದಿಗೆ ಮದುವೆ ಪ್ರಸ್ತಾಪ ಬರುತ್ತಲೇ ಅವರು ತಿರಸ್ಕಾರ ಮಾಡಿದ್ದರು. ಆದರೆ ಸಮಾಜದ ಗುರು, ಹಿರಿಯರು ಸತತ ಪ್ರಯತ್ನ ಮಾಡಿ ಮದುವೆಗೆ ಕೊನೆಗೂ ಒಪ್ಪಿಸಿದ್ದಾರೆ. ಈ ಪರಿಣಾಮ ಹುಬ್ಬಳ್ಳಿ ಅರವಿಂದ ನಗರದ ಮನೆ ಮುಂದೆ ಡಿಕೆ ಚೌಹಾಣ್ ಮತ್ತು ಅನಸೂಯಾ ಮದುವೆ ಅದ್ದೂರಿಯಾಗಿ ನಡೆದಿದೆ.
ಅರವಿಂದ ನಗರದಲ್ಲಿರುವ ಚೌಹಾಣ್ ಮನೆ ಮುಂದೆ ಅದ್ದೂರಿಯಾಗಿ ಪೆಂಡಾಲ್ ಹಾಕಿ ಶಾಸ್ತ್ರೋಕ್ತವಾಗಿ, ಸಮಾಜದ ಮತ್ತು ಕುಟುಂಬಸ್ಥರ ಸಾಕ್ಷಿಯಾಗಿ, ಯುವ ಜೋಡಿಗಳ ಮದುವೆ ಮೀರಿಸೋ ರೀತಿಯಲ್ಲಿ ಈ ಹಿರಿ ಜೋಡಿಗಳು ಮದುವೆಯಾಗಿದ್ದಾರೆ. ಈ ಹಿರಿ ಜೀವಗಳಿಗೆ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರೇ ಮುಂದೆ ನಿಂತು ಮದುವೆ ಕಾರ್ಯ ಮಾಡಿದ್ದು ಮತ್ತೊಂದು ವಿಶೇಷ. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ