ತುಮಕೂರು: (Tumakuru) ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಕಾರು ಬಿಡುಗಡೆ ಮಾಡಲು 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಪೇದೆಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಕಾರು ಬಿಡಲು ಹಣ ಕೇಳಿದ ವಿಭಾಗದ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ. ಕುಣಿಗಲ್ ಠಾಣೆಯ ಅಪರಾಧ ವಿಭಾಗದ ನವೀನ್ ಅಮಾನತುಗೊಂಡ ಪೇದೆ. ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು – ಡಿಕೆಶಿ
Advertisement
Advertisement
ಏನಿದು ಪ್ರಕರಣ: ವಕೀಲರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ, ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿ ಅವರಿಂದ ಕಾರು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು. ಕಾರಿನ ಮಾಲೀಕರು ವಕೀಲರ ಮೂಲಕ ಕಾರು ಬಿಡುಗಡೆಗೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.
Advertisement
Advertisement
ಈ ನಿಟ್ಟಿನಲ್ಲಿ ನ್ಯಾಯಾಲಯವು ಕಾರು ಬಿಡುಗಡೆಗೆ ಆದೇಶ ನೀಡಿತ್ತು. ಆದರೆ ಕಾರು ಬಿಡುಗಡೆಗೆ ಪೇದೆ ನವೀನ್ 50 ಸಾವಿರ ರೂ. ಕೊಡುವಂತೆ ಕಾರು ಮಾಲೀಕರಿಗೆ ಒತ್ತಾಯಿಸಿದ್ದರು. ಈ ಸಂಬಂಧ ಕಾರು ಮಾಲೀಕರು ವಕೀಲರ ಮೂಲಕ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ದಿಸೆಯಲ್ಲಿ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಿದ ಹಿನ್ನೆಲೆಯಲ್ಲಿ ನವೀನ್ ಅವರನ್ನು ಸೇವೆಯಿಂದ ಜಿಲ್ಲಾ ಎಸ್ಪಿ ಅಮಾನತು ಪಡಿಸಿದ್ದಾರೆ. ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಆಟೋ ಚಾಲಕನ ಹತ್ಯೆ