ಜೈಪುರ: ರಾಜಸ್ಥಾನ ಸಚಿವ ಶಾಂತಿ ಧರಿವಾಲ್ (Shanti Dhariwal) ವಿರುದ್ಧ ಕೆಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಾಗ್ದಾಳಿ ನಡೆಸಿದ್ದಾರೆ.
ಬಿಕಾನೆರ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಧರಿವಾಲ್ ಅವರು ಕಳೆದ ವರ್ಷ ನೀಡಿದ್ದ ‘ಅತ್ಯಾಚಾರಿಗಳೊಂದಿಗೆ ಪುರುಷತ್ವ ಥಳಕು ಹಾಕಿಕೊಂಡಿದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಗರಂ ಆದರು. ಧರಿವಾಲ್ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಕಿಡಿಕಾರಿದರು.
Advertisement
Advertisement
ರಾಜಸ್ಥಾನವು ನಿಜವಾಗಿಯೂ ಪುರುಷರ ರಾಜ್ಯವಾಗಿದೆ. ಇಲ್ಲಿರುವ ಪುರುಷತ್ವದ ಕಾರಣಕ್ಕಾಗಿಯೇ ಹಿಂದುತ್ವ, ಸನಾತನ ಧರ್ಮವು ಇಂದು ಭಾರತದಲ್ಲಿ ಜೀವಂತವಾಗಿದೆ ಎಂದು ತಿಳಿಸಿದ್ದಾರೆ.
Advertisement
ಪೃಥ್ವಿರಾಜ್ ಚೌಹಾಣ್, ಬಪ್ಪಾ ರಾವಲ್, ರಾಣಾ ಸಂಗ, ವೀರ್ ದುರ್ಗಾದಾಸ್ ರಾವ್ ಚಂದ್ರಸೇನ್, ಮಹಾರಾಣಾ ಪ್ರತಾಪ್ ಅವರು ರಾಜಸ್ಥಾನದಲ್ಲಿ ಹುಟ್ಟಿದಿದ್ದರೆ ಇಂದು ನಮ್ಮ ಹೆಸರು ಬೇರೆಯದೇ ಆಗಿರುತ್ತಿತ್ತು ಎಂದು ಶೇಖಾವತ್ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್
Advertisement
ರಾಜಸ್ಥಾನದ ಪುರುಷತ್ವಕ್ಕೆ ಕಪ್ಪು ಮಸಿ ಬಳಿಯುವ ಕೆಲಸವನ್ನು ಮಾಡಿದವರು ಯಾರು? ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಈ ಕೆಲಸ ಮಾಡಿದೆ. ಇಂದಿಗೂ ಧರಿವಾಲ್ ಅವರು ಸಂಪುಟದ ಭಾಗವಾಗಿರುವುದು ದುರದೃಷ್ಟಕರ. ಅವರು ಇನ್ನೂ ಸಚಿವರಾಗಿದ್ದಾರೆ. ಅವರನ್ನು ಹೊರಹಾಕಬೇಕು ಇಲ್ಲವೇ ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದು ಶೇಖಾವತ್ ವಾಗ್ದಾಳಿ ನಡೆಸಿದರು.
ಧರಿವಾಲ್ ಹೇಳಿದ್ದೇನು..?: 2022ರ ಮಾರ್ಚ್ ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ರಾಜಸ್ಥಾನ ಪುರುಷರ ಪ್ರದೇಶ ಎಂದು ಹೇಳಿಕೆ ನೀಡಿದ್ದರು.
Web Stories