ತುಮಕೂರು: ಕೆಲ ಸಂದರ್ಭದಲ್ಲಿ ನನ್ನ ದುರಹಂಕಾರದಿಂದ ನನಗೆ ತೊಂದರೆ ಆಗಿದೆ. ಕೆಲ ವೇಳೆ ನಾನು ಮಾಡಿದ ತೀರ್ಮಾನ ನನಗೆ ತೊಂದರೆ ಕೊಟ್ಟಿದೆ. ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ. ಅದನ್ನು ಒರೆಸಿಕೊಂಡು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ (V Somanna) ಹೇಳಿಕೆ ನೀಡಿದ್ದಾರೆ.
ಗುರುಭವನ ಲೋಕಾರ್ಪಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಡವಳಿಕೆ ಬೇರೆಯವರಿಗೆ ಹೋಲಿಸಬೇಡಿ. ನಾನು ಒಂದಕ್ಕೆ ಅಂಟಿಕೊಂಡವನಲ್ಲ. ನನ್ನ ಅರ್ಹತೆ ಪಕ್ಷ ಗುರುತಿಸಿದ್ಯೋ ಇಲ್ಲವೋ ಎನ್ನುವುದನ್ನು ಈಗ ಮಾತನಾಡಲ್ಲ. ಆದರೆ ಒಂದಂತು ಸತ್ಯ. ಅರ್ಹತೆಗೆ ಈ ರೀತಿಯ ಮಾನದಂಡ ಆಗಬಾರದು. ಅರ್ಹತೆ ಅವಕಾಶ ವಂಚಿತ ಆಗಬಾರದು ಎಂದರು. ಇದನ್ನೂ ಓದಿ: ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ
ಅರ್ಹತೆ ಯಾರ ಮನೆಯ ಸ್ವತ್ತಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದರೂ ನಡೆದುಕೊಳ್ಳಬಾರದು ಎಂಬುದನ್ನು ಅವರು ಕೂಡಾ ಯೋಚನೆ ಮಾಡಬೇಕು. ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಚಿಂತನೆ ಮಾಡುತ್ತಾರೋ ಏನೋ ಗೊತ್ತಿಲ್ಲ. ನಾನು ತೆರೆದ ಪುಸ್ತಕ, ಓಡಿ ಹೋಗುವವನಲ್ಲ. ಅನಾವಶ್ಯಕವಾಗಿ ನನ್ನನ್ನು ಸಣ್ಣಪುಟ್ಟವರ ಜೊತೆ ಹೋಲಿಕೆ ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ
ಪರಮೇಶ್ವರ್ (G Parameshwar) ಅವರು ನಾನು ಚೆನ್ನಾಗಿರಲಿ ಎಂದು ಅಭಯ ಕೊಟ್ಟಿದ್ದಾರೆ. ಅದು ಅವರ ದೊಡ್ಡತನ. ನೀವು ಯಾಕೆ ಅದನ್ನು ನೆಗೆಟಿವ್ ಆಗಿ ಯೋಚನೆ ಮಾಡುತ್ತೀರಿ? ನನ್ನ ಅವರ ಪ್ರೀತಿ ವಿಶ್ವಾಸಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ