Bengaluru CityDistrictsKarnatakaLatestMain Post

ಸ್ಯಾನಿಟರಿ ನ್ಯಾಪ್‍ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್

ಬೆಂಗಳೂರು: ಜಿಎಸ್‍ಟಿ ಜಾರಿಯಿಂದ ಸಾನಿಟರಿ ನ್ಯಾಪ್‍ಕಿನ್‍ಗಳು ದುಬಾರಿಯಾಗಿದೆ ಅಂತಾ ಪ್ರಧಾನಿ ಮೋದಿ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ರೆ. ಇತ್ತ ಬಿಜೆಪಿಯ ವಕ್ತಾರೆ ಆಗಿರುವ ಮಾಳವಿಕಾ ಅವಿನಾಶ್ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

`ಸ್ಯಾನಿಟರಿ ನ್ಯಾಪ್‍ಕಿನ್ ಬೇಡವೇ ಬೇಡ. ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿದ್ದಕ್ಕೆ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‍ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‍ಗಳಿಗೆ ತಮ್ಮ ಪ್ಯಾಡ್ಸ್ ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ’ ಅಂತಾ ಹೇಳಿದ್ದಾರೆ.

ಮಾಳವಿಕಾ ಅಭಿಪ್ರಾಯ ಯೋಗ ಗುರು ಬಾಬಾ ರಾಮ್‍ದೇವ್‍ಗೂ ಉದ್ರೇಕ ಮಾಡಬಹುದು, ಅವರು ಪತಂಜಲಿ ಕಾಂಡೋಮ್ ತರಬಹುದು ಅಂತ ಸದ್ಯ ಸಾಮಾಜಿಕ ಜಾಲತಾಣ ಫೇಸ್‍ಬುಕ್ ತುಂಬಾ ಕಾಣ್ತಿರೋದು ಇದು ಎರಡೇ ವಿಷ್ಯ, ಒಂದು ಮೊಟ್ಟೆಯ ಕಥೆ, ಇನ್ನೊಂದು ಮಾಳವಿಕಾ ಬಟ್ಟೆಯ ವ್ಯಥೆ ಅಂತಾ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದಾರೆ.

Leave a Reply

Your email address will not be published.

Back to top button