ಬೆಳಗಾವಿ: ಗೋವಾದ ಆರ್‌ಪಿಎಫ್ ಪೊಲೀಸರು (RPF Police) ಮಿಂಚಿನ ಕಾರ್ಯಾಚರಣೆ ನಡೆಸಿ ರೈಲಿನಲ್ಲಿ (Train) ಆ್ಯಕ್ಟಿವ್ ಆಗಿದ್ದ ಚಾಕ್ಲೇಟ್ ಗ್ಯಾಂಗ್ (Chocolate Gang) ಅನ್ನು ಅರೆಸ್ಟ್ ಮಾಡಿದ್ದಾರೆ.
ದಿನನಿತ್ಯ ಗೋವಾ-ಬೆಳಗಾವಿ ಮಾರ್ಗಮಧ್ಯದಲ್ಲಿ ಚಲಿಸುವ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಪ್ರಯಾಣಿಕರ ಗೆಳೆತನ ಬೆಳೆಸಿಕೊಂಡು ದರೋಡೆ ಮಾಡ್ತಿದ್ದ ಗ್ಯಾಂಗ್ ಅನ್ನು ಇದೀಗ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ರೈಲಿನಲ್ಲಿ ಆ್ಯಕ್ಟಿವ್ ಆಗಿದ್ದ ಚಾಕ್ಲೇಟ್ ಗ್ಯಾಂಗ್ ಕೈಚಳಕದಿಂದಾಗಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದರು. ಕಳೆದ 20 ದಿನಗಳ ಹಿಂದೆ ಗೋವಾ-ಬೆಳಗಾವಿ ಮಾರ್ಗದಲ್ಲಿ ಮಧ್ಯಪ್ರದೇಶ (Madhya Pradesh) ಮೂಲದ ಎಂಟು ಜನ ಪ್ರಯಾಣಿಕರಿಗೆ ತಮ್ಮ ಕೈಚಳಕ ತೋರಿ ಮತ್ತು ಬರುವ ಚಾಕ್ಲೇಟ್ ನೀಡಿ ಹಣ, ಮೊಬೈಲ್ ದೋಚಿದ್ದರು. ಇದನ್ನೂ ಓದಿ: ಮೂತ್ರ ವಿಸರ್ಜನೆ ವಿಚಾರಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ!
ಅಸ್ವಸ್ಥರಾಗಿದ್ದವರಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 8 ಜನರು ಪ್ರಾಣಾಪಾಯದಿಂದ ಪಾರಾಗಿ ತಮ್ಮೂರಿಗೆ ಮರಳಿದ್ದರು. ಈ ಸಂಬಂಧ ಗೋವಾ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋವಾದ ಆರ್‌ಪಿಎಫ್ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಸರ್ತಾಜ್ (29), ಚಂದನ್ ಕುಮಾರ್ (23), ದಾರಾಕುಮಾರ್ (29) ಬಂಧಿತ ಆರೋಪಿಗಳು. ಇದನ್ನೂ ಓದಿ: ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬ್ಯಾಲೆಟ್ ಪೇಪರ್ ದೋಚಿದ ಕಿಡಿಗೇಡಿಗಳು
ಬಂಧಿತರಿಂದ ಚಾಕ್ಲೇಟ್ ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನು ಪುಡಿ ಮಾಡಿ ಸೇರಿಸಿ ರೈಲಿನಲ್ಲಿ ಗೆಳೆತನ ಬೆಳೆಸಿ ಪ್ರಯಾಣಿಕರಿಗೆ ನೀಡುತ್ತಿದ್ದರು. ಅದೇ ಮಾದರಿಯ ಮತ್ತಿಲ್ಲದ, ಮತ್ತು ಬಾರದ ಅಸಲಿ ಚಾಕ್ಲೇಟನ್ನು ತಾವು ತಿನ್ನುತ್ತಿದ್ದರು. ಮತ್ತು ಬರುವ ಚಾಕ್ಲೇಟ್ ತಿನ್ನುತ್ತಿದ್ದಂತೆ ಪ್ರಯಾಣಿಕರು ಮೂರ್ಛೆ ಹೋಗ್ತಿದ್ದರು. ಈ ಸಂದರ್ಭ ತಕ್ಷಣ ಈ ಗ್ಯಾಂಗ್ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನು ದೋಚಿ ಎಸ್ಕೇಪ್ ಆಗುತ್ತಿದ್ದರು. ರೈಲಿನಲ್ಲಿ ಈ ಪ್ರಕರಣಗಳು ಜಾಸ್ತಿ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈ ಗ್ಯಾಂಗ್ ಮೇಲೆ ಕಣ್ಣಿಟ್ಟು ಚಾಕ್ಲೇಟ್ ನೀಡುವಾಗ ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು
Web Stories