ಮಾಡಾಳ್‍ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್

Public TV
1 Min Read
madal virupakshappa 2

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಲಂಚ ಪಡೆದ ಆರೋಪದಲ್ಲಿ ಲೋಕಾ ಕಸ್ಟಡಿಯಲ್ಲಿದ್ದು, ಇದೀಗ ಅವರನ್ನು ಮೇಂಟೈನ್ ಮಾಡೋದು ಲೋಕಾಯುಕ್ತ (Lokayukta Police) ಪೊಲೀಸರಿಗೆ ದೊಡ್ಡ ಸವಾಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಹೌದು. ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬೆಡ್ ರೂಂನಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣದಲ್ಲಿ ಲೋಕಾಯಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧನ ಮಾಡಿದ್ದಾರೆ. ಕಳೆದ ನಾಲ್ಕು ದಿನದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ಕಸ್ಟಡಿಯಲ್ಲಿದ್ದು, ಕೋಟಿ ಕೋಟಿ ಹಣದ ತನಿಖೆ ಎದುರಿಸುತ್ತಿದ್ದಾರೆ. ದಿನಕ್ಕೆ ನಾಲ್ಕಾರು ಗಂಟೆ ವಿಚಾರಣೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

MADAL 2

ತನಿಖೆ ಬಳಿಕ ಲೋಕಾಯುಕ್ತ ಕಸ್ಟಡಿಯಲ್ಲಿರೋ ಮಾಡಾಳ್ ವಿರೂಪಾಕ್ಷಪ್ಪ ಲೋಕಾ ಕಚೇರಿಯಲ್ಲಿ ರಾತ್ರಿ ಕಳೆಯಲು ಸಾಕಷ್ಟು ಹೆಣಗಾಡುತ್ತಿದ್ದಾರಂತೆ. ಇದ್ದಕ್ಕಿದ್ದಂತೆ ಮೌನಕ್ಕೆ ಜಾರಿ ಹೋಗೋದು ಗಂಟೆಗಟ್ಟಲೆ ಯಾರ ಜೊತೆ ಮಾತನಾಡದೇ ಸುಮ್ಮನಾಗೋದು. ಕೆಲವು ವೇಳೆ ಗಳಗಳ ಅಳಲು ಶುರು ಮಾಡ್ಕೊಳ್ತಾರಂತೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಈ ನಡೆ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಅಂತೆ.

MADAL 1

ಮಾಡಾಳ್ ವಿರೂಪಾಕ್ಷಕ್ಕೆ ಏಕಾಂಗಿತನ ಕಾಡುತ್ತಿರುಬಹುದೆಂದು ಪೊಲೀಸರೇ ಮಾಡಾಳ್ ವಿರೂಪಾಕ್ಷಪ್ಪಗೆ ಮೋಟಿವೇಷನ್ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರಂತೆ. ಏನು ಆಗೋದಿಲ್ಲ ನೀವು ಧೈರ್ಯವಾಗಿರಬೇಕು. ಈ ರೀತಿಯ ನಡವಳಿಕೆ ನಿಮ್ಮನ್ನ ಕುಗ್ಗಿಸುತ್ತೆ. ಹಾಗಾಗಿ ಹೆಚ್ಚಾಗಿ ತಲೆಗೆ ಹಾಕಿಕೊಳ್ಳದೆ ಹಾಯಾಗಿ ಇರಿ ಎಂದು ನಿತ್ಯ ಮಾಡಾಳ್ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಪೊಲೀಸರು ಮೋಟಿವೇಷನ್ ಮಾಡುತ್ತಿದ್ದಾರಂತೆ.

MADAL

ಲೋಕಾಯುಕ್ತ ಕಸ್ಟಡಿಯಲ್ಲಿರೋ ಮಾಡಾಳ್ ವಿರೂಪಾಕ್ಷಪ್ಪ ಅವರ ಕಸ್ಟಡಿ ಇಂದಿಗೆ ಅಂತ್ಯವಾಗುತ್ತಿದೆ. ಕಸ್ಟಡಿ ಮುಗಿದ ಬಳಿಕ ಬಹುತೇಕ ಜೈಲಿಗೆ ಕಳಿಸಿಕೊಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಹೆಚ್ಚು ಚಿಂತೆಗೆ ಜಾರಿರೋ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Share This Article