– ಹೆಚ್ಚು ಸ್ಥಾನಗಳಿಸಿದರೂ ಕಾಂಗ್ರೆಸ್ಸಿಗಿಲ್ಲ ಬಹುಮತ
– ಬಿಜೆಪಿಗೆ 85 ರಿಂದ 95 ಸ್ಥಾನ ಕೊಟ್ಟ ಮತದಾರ
ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. Mood Of Karnataka ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯಲ್ಲಿ (Public TV Survey) ಮತದಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವನ್ನು ನೀಡಿಲ್ಲ. ಬಹುಮತಕ್ಕೆ ಬೇಕಾದ 112 ಸ್ಥಾನವನ್ನು ಯಾವ ಪಕ್ಷವೂ ಗಳಿಸುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ (Congress) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಆಡಳಿತರೂಢ ಬಿಜೆಪಿ (BJP) ಎರಡನೇ ಸ್ಥಾನ ಪಡೆಯಲಿದೆ.
Advertisement
ಈ ಸಮೀಕ್ಷೆಯೇ ಅಂತಿಮವಲ್ಲ. ಅಭ್ಯರ್ಥಿಗಳ ಆಯ್ಕೆ, ಮೀಸಲಾತಿ ವಿಚಾರವನ್ನು ಪರಿಗಣಿಸದೇ ಈ ಸಮೀಕ್ಷೆ ನಡೆಸಿದ್ದರಿಂದ ಅಂಕಿ ಸಂಖ್ಯೆಗಳು ಚುನಾವಣೆ (Karnataka Election 2023) ದಿನಾಂಕ ಹತ್ತಿರಕ್ಕೆ ಬಂದಂತೆ ಬದಲಾಗಬಹುದು. ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಅಂತಿಮವಾದ ಬಳಿಕ ಒಂದಿಷ್ಟು ಕ್ಷೇತ್ರಗಳಲ್ಲಿ ರಾಜಕೀಯ ಸಮೀಕರಣಗಳು ಬದಲಾಗುವುದು ಸಹಜ.
Advertisement
ಜಾತಿ ಸಮುದಾಯ, ಮೀಸಲಾತಿ, ಒಳಮೀಸಲಾತಿ, ಪಕ್ಷಾಂತರ, ಬಂಡಾಯ, ಮ್ಯಾಚ್ ಫಿಕ್ಸಿಂಗ್ ಪರಿಣಾಮಗಳು ಏನು ಎಂಬುದು ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಎಲ್ಲರಿಗೂ ಫಿಫ್ಟಿ ಫಿಫ್ಟಿ ಕ್ಷೇತ್ರಗಳೇ ನಿರ್ಣಾಯಕ. ಫಿಫ್ಟಿ ಫಿಫ್ಟಿ ಅವಕಾಶ ಇರುವ ಕ್ಷೇತ್ರಗಳ ಸಂಖ್ಯೆ ಕೂಡ ಕಡಿಮೆ ಏನಿಲ್ಲ. 20 ಕ್ಷೇತ್ರಗಳಲ್ಲಿ ವಿಜಯಮಾಲೆ ಯಾರಿಗೆ ಒಲಿಯುತ್ತೆ ಎನ್ನುವುದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
Advertisement
ಗೋವಿಂದರಾಜನಗರ, ಬ್ಯಾಟರಾಯನಪುರ, ಅರಸಿಕೆರೆ, ಶ್ರೀನಿವಾಸಪುರ ಸೇರಿ ಹಲವು ಕ್ಷೇತ್ರಗಳಲ್ಲಿ ಸದ್ಯಕ್ಕೆ ನೆಕ್ ಟು ನೆಕ್ ಫೈಟ್ ಇದೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಸೆಮಿಫೈನಲ್ ಪಬ್ಲಿಕ್ ಸರ್ವೆ, ಇದಾದ ನಂತರ ಫೈನಲ್ ಪಬ್ಲಿಕ್ ಸರ್ವೆಯನ್ನು ನಿಮ್ಮ ಪಬ್ಲಿಕ್ ಟಿವಿ ಪ್ರಕಟಿಸಲಿದೆ.
Advertisement
ಸಮಗ್ರ ಕರ್ನಾಟಕ ಒಟ್ಟು ಕ್ಷೇತ್ರಗಳು 224
ಆವರಣದ ಒಳಗಡೆ ನೀಡಿರುವುದು 2018ರಲ್ಲಿ ಪಡೆದ ಸ್ಥಾನಗಳು
ಹಳೆ ಮೈಸೂರು ಒಟ್ಟು ಕ್ಷೇತ್ರಗಳು 57
ಬಿಜೆಪಿ -11 (11)
ಕಾಂಗ್ರೆಸ್ – 19 (17)
ಜೆಡಿಎಸ್ – 26 (27)
ಇತರೆ – 1 (2)
ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
ಬಿಜೆಪಿ – 12 (16)
ಕಾಂಗ್ರೆಸ್ – 25 (21)
ಜೆಡಿಎಸ್ – 3 (4)
ಇತರೆ -1 (0)
ಕರಾವಳಿ ಕರ್ನಾಟಕ ಒಟ್ಟು ಕ್ಷೇತ್ರಗಳು 19
ಬಿಜೆಪಿ – 16 (16)
ಕಾಂಗ್ರೆಸ್ – 3 (3)
ಜೆಡಿಎಸ್ – 0 (0)
ಕಿತ್ತೂರು ಕರ್ನಾಟಕ ಒಟ್ಟು ಕ್ಷೇತ್ರಗಳು 50
ಬಿಜೆಪಿ – 22 (30)
ಕಾಂಗ್ರೆಸ್ – 26 (17)
ಜೆಡಿಎಸ್ – 2 (2)
ಮಲೆನಾಡು ಮತ್ತು ಮಧ್ಯ ಕರ್ನಾಟಕ ಒಟ್ಟು ಕ್ಷೇತ್ರಗಳು 25
ಬಿಜೆಪಿ – 16 (20)
ಕಾಂಗ್ರೆಸ್ -9 (5)
ಜೆಡಿಎಸ್ – 0 (0)
ಗ್ರೇಟರ್ ಬೆಂಗಳೂರು ಒಟ್ಟು ಕ್ಷೇತ್ರಗಳು 32
ಬಿಜೆಪಿ 16 (11)
ಕಾಂಗ್ರೆಸ್ 14 (17)
ಜೆಡಿಎಸ್ 3 (4)
ಸಮಗ್ರ ಕರ್ನಾಟಕ ಒಟ್ಟು ಕ್ಷೇತ್ರಗಳು 224
ಬಿಜೆಪಿ : 85-95 (104)
ಕಾಂಗ್ರೆಸ್ : 98-108 (80)
ಜೆಡಿಎಸ್ : 28-33 (37)
ಇತರೆ : 00-02 (2)
ಒಟ್ಟು 50:50 ಕ್ಷೇತ್ರಗಳು – 20
ಉದಾಹರಣೆಗೆ: ಗೋವಿಂದರಾಜನಗರ, ಬ್ಯಾಟರಾಯನಪುರ, ಅರಸೀಕೆರೆ, ಶ್ರೀನಿವಾಸಪುರ ಇತರೆ