ಬೆಂಗಳೂರು: ಸಿಲಿಕಾನ್ ಸಿಟಿಯ ಮಾಗಡಿ ರಸ್ತೆಯಲ್ಲಿ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಭೀಕರ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.
ಘಟನೆ ಬೆಂಗಳೂರಿನ ಜ್ಞಾನಭಾರತಿಯ ಉಲ್ಲಾಳ ರಸ್ತೆಯ ಮಂಗಳೂರು ಕಾಲೇಜ್ ಬಳಿ ನೆಕ್ಸನ್ ಕಾರಿನ ಬಾನೆಟ್ (Car Bonnet) ಮೇಲೆ ಎರಡು ಕಿಲೋಮೀಟರ್ ಬೈಕ್ ಸವಾರ ಸುತ್ತಾಡಿದ್ದಾನೆ. ಕಾರು ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ.
Advertisement
Advertisement
ಏನಿದು ಘಟನೆ..?: ಶುಕ್ರವಾರ (ಇಂದು) ಬೆಳಗ್ಗೆ 10.30ರ ಸುಮಾರಿಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್ ಸಿಗ್ನಲ್ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್ ಇರುವುದು ಕಾಣಿಸಲ್ವಾ ಎಂದು ಬೈಕ್ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗುತ್ತಿದ್ದಳು. ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ (Bike Rider) ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ
Advertisement
Advertisement
ಆದರೆ ಮಹಿಳೆ ಮಾತ್ರ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ. ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.
ವೃದ್ಧನ ಎಳೆದೊಯ್ದಿದ್ದ ಸವಾರ: ಮಂಗಳವಾರ ಸಿಲಿಕಾನ್ ಸಿಟಿಯ ವಿಜಯನಗರದ ಹೊಸಹಳ್ಳಿಯಲ್ಲಿ ನಡೆದ ಘಟನೆ ಮಾನವ ಕುಲಕ್ಕೆ ಅವಮಾನ ಎಸಗುವಂತೆ ಮಾಡಿತ್ತು. ಈ ಕಾಲದಲ್ಲಿ ಯಾವುದೇ ಪ್ರಾಣಿಗಳನ್ನ ಕೂಡ ಅಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ ದ್ವಿಚಕ್ರ ವಾಹನ ಸವಾರ ಶಾಹಿಲ್, ಬೊಲೆರೋ ಟಚ್ ಮಾಡಿದ್ದಲ್ಲದೆ ಮುತ್ತಪ್ಪಗೆ ಕಾಲಲ್ಲಿ ಒದ್ದು ಎಸ್ಕೇಪ್ ಆಗ್ತಿದ್ದ.
ಈ ವೇಳೆ ಬಿಡಬಾರದು ಅಂತಾ ಗಾಡಿ ಹಿಡಿದಿದ್ದ ಮುತ್ತಪ್ಪರನ್ನ ಶಾಹಿಲ್ ಅರ್ಧ ಕೀ.ಮಿಗೂ ಹೆಚ್ಚು ಧರಧರನೇ ಎಳೆದೊಯ್ದಿದ್ದ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಮುತ್ತಪ್ಪಗೆ ಇಂದೂ ಟ್ರೀಟ್‍ಮೆಂಟ್ ಮುಂದುವರಿದಿದೆ. ಎಕ್ಸ್ ರೇ ಮಾಡಿಸಿದ್ದು, ಬೋನ್ ಗಳಿಗೆ ತೊಂದರೆಯಾಗಿಲ್ಲ. ದೇಹದ ಗಾಯಗಳ ನೋವು ಇನ್ನೂ ಆರಿಲ್ಲ ಎಂದು ಮತ್ತಪ್ಪ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k