ಹಾವೇರಿ: 5 ರಿಂದ 10 ಲಕ್ಷ ಹಣವಿದ್ದರೆ ಕಾರನ್ನೇ ಖರೀದಿ ಮಾಡ್ಬೋದು, ಆದರೆ ಶರವೇಗದ ಓಟಕ್ಕೆ ಹೆಸರಾಗಿದ್ದ ಹೋರಿಯೊಂದು ಬರೋಬ್ಬರಿ 19 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
Advertisement
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ ರೈತ ಕರಿಬಸಪ್ಪ ಅವರ ಹೋರಿಯೇ 19 ಲಕ್ಷಕ್ಕೆ ಮಾರಾಟವಾಗಿರುವುದು. ಕರಿಬಸಪ್ಪನ ಮನೆಯವರಿಗೆ ಹೋರಿ ಹಬ್ಬದ ಓಟದ ಸ್ಪರ್ಧೆ ಅಂದ್ರೆ ತುಂಬಾ ಪ್ರೀತಿ. ಕರಿಬಸಪ್ಪನವರ ತಲೆಮಾರು ಓಟಕ್ಕೆ ಅಂತಲೇ ಫೇಮಸ್ ಆಗಿತ್ತು. ಅವರೂ ಸಹ ಮೂರ್ನಾಲ್ಕು ಹೋರಿಗಳನ್ನು ತಂದಿದ್ದರು. ಆದರೆ ಅವು ಹೆಚ್ಚು ಹೆಸರು ಮಾಡಲಲ್ಲ. ಅದಕ್ಕಾಗಿ ಕಳೆದ 3 ವರ್ಷಗಳ ಹಿಂದೆ ತಮಿಳುನಾಡಿನಿಂದ 1.25 ಲಕ್ಷಕ್ಕೆ ಅಮೃತಮಹಲ್ ಹಳ್ಳಿಕಾರ ಜಾತಿಯ ಹೋರಿ ತಂದಿದ್ದರು. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು
Advertisement
Advertisement
`ವಾಸನ ಬ್ರಹ್ಮ’ ಅಂತಾ ಹೆಸರು ಕೂಡ ನಾಮಕರಣ ಮಾಡಿದ್ದರು. ಹೀಗೆ ತಂದ ಹೋರಿಯನ್ನು ಕೊಬ್ಬರಿ ಹೋರಿ ಬೆದಿರಿಸೋ ಹಬ್ಬಕ್ಕೆ ಕೊಬ್ಬರಿ ಹಾರ ಕಟ್ಟಿ ಬಿಡತೊಡಗಿದರು. ಆರಂಭದಿಂದಲೂ ಧೂಳೆಬ್ಬಿಸಿದ್ದ ಹೋರಿ, ಓಟದ ಸ್ಪರ್ಧೆಯ ಅಖಾಡದಲ್ಲಿ ಭರ್ಜರಿ ಹೆಸರು ಮಾಡಿತ್ತು. ಹಲವು ಬಹುಮಾನಗಳನ್ನೂ ತಂದುಕೊಟ್ಟಿತ್ತು. ಅದಕ್ಕಾಗಿ ಈಗ ಬ್ರಹ್ಮ ಹೆಸರಿನ ಈ ಹೋರಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಶರವೇಗದ ಓಟಕ್ಕೆ ಹೆಸರಾಗಿದ್ದರಿಂದ ಹೋರಿ ಬರೋಬ್ಬರಿ 19 ಲಕ್ಷಕ್ಕೆ ಮಾರಾಟವಾಗಿದೆ. ಕಾರುಗಳ ಬೆಲೆಯನ್ನೂ ಮೀರಿಸುವಂತೆ ಹೋರಿಗೆ ಬಂಪರ್ ಬೆಲೆ ಸಿಕ್ಕಿದೆ. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ
Advertisement
ಶರವೇಗದ ಓಟಕ್ಕೆ ಹೆಸರಾಗಿರೋ ಬ್ರಹ್ಮಹೋರಿ ಬಂಪರ್ ಬೆಲೆಗೆ ಮಾರಾಟ ಆಗಿರೋದು ಹೋರಿ ಮಾಲೀಕರಿಗೆ ಖುಷಿ ತರಿಸಿದೆ. ಆದರೆ ನೆಚ್ಚಿನ ಅಭಿಮಾನಿಗಳಿಗೆ ಇದು ಬೇಸರವಾಗಿದೆ. ಈಗಾಗಲೆ ತಮಿಳುನಾಡಿನವರು ಹೋರಿಗೆ 19 ಲಕ್ಷ ರೂಪಾಯಿ ನಿಗದಿಪಡಿಸಿ 6 ಲಕ್ಷ ರುಪಾಯಿ ಮುಂಗಡ ಹಣ ಕೊಟ್ಟು ಹೋಗಿದ್ದಾರೆ.