ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯಥಾಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ.
Advertisement
ಕಾಲೋನಿಯ ನಂ.1 ಕ್ಯಾಂಪ್‍ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್(90) ಸೆ. 9 ರಂದು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದರು. ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ. ಇದೀಗ ಹತ್ತು ದಿನ ಕಳೆದರೂ ಕೂಡ ಮೃತದೇಹದಲ್ಲಿ ನೀರು ಒಡೆಯುವುದಾಗಲಿ, ವಾಸನೆ ಬರುವುದಾಗಲಿ, ಕೊಳೆಯುವುದಾಗಲಿ ಆಗದೇ ಯಥಾಸ್ಥಿತಿಯಲ್ಲಿದ್ದು ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರೇಮ ವೈಫಲ್ಯ- ರೈಲ್ವೇ ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ
Advertisement
Advertisement
ಈ ಸನ್ಯಾಸಿಯು ಕ್ಯಾಂಪ್‍ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವವರೆಗೂ ಅಂತ್ಯಸಂಸ್ಕಾರ ಮಾಡದಿರಲು ಟಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ.
Advertisement
ಅಂತ್ಯ ಸಂಸ್ಕಾರ ಹೇಗಿರುತ್ತೆ?
ಬೌದ್ಧ ಸನ್ಯಾಸಿಗಳು ಮರಣ ಹೊಂದಿದ ನಂತರ ಅವರ ದೇಹವನ್ನು ಊರಿನ ದೂರದ ಬೆಟ್ಟ ಪ್ರದೇಶದಲ್ಲಿ ಇಡಲಾಗುತ್ತದೆ. ಆ ದೇಹವನ್ನು ರಣ ಹದ್ದುಗಳು ತಿನ್ನಲು ಬಿಡುವುದು ಟಿಬೇಟಿಯನ್‍ರ ಸಂಪ್ರದಾಯ. ಆದರೆ ಇಂದಿನ ದಿನದಲ್ಲಿ ಆ ರೀತಿಯಲ್ಲಿ ವ್ಯವಸ್ಥೆಗಳು ಇಲ್ಲದ ಕಾರಣ ದೇಹವನ್ನು ಹೂತು ಹಾಕಿ ಆ ಸ್ಥಳದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಅಂತ್ಯ ಸಂಸ್ಕಾರದ ವೇಳೆ ಬೌದ್ಧ ಧರ್ಮದ ರಿವಾಜುಗಳ ಮೂಲಕ ಮೆರವಣಿಗೆ ಮಾಡಿ ನಂತರ ಜನರಿಗೆ ನಮಸ್ಕರಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ