ರಾಮನಗರ: 37 ಸ್ಥಾನ ಪಡೆದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದೇ ದೊಡ್ಡ ವ್ಯಂಗ್ಯ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ.
ಜಿಲ್ಲೆಯ ಬಿಡದಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ವ್ಯಂಗ್ಯ ಮಾಡುವ ಮುನ್ನ ಕಾಂಗ್ರೆಸ್ಸಿಗರು ಮುಟ್ಟಿ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ನಮ್ಮನ್ನು ವ್ಯಂಗ್ಯ ಮಾಡುತ್ತಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆ ಸ್ಥಾನಕ್ಕೆ ತಕ್ಕಂತೆ ವರ್ತಿಸಬೇಕಿದೆ. ಈ ಮೊದಲು ಸಿಎಂ ಮಾತು ನೀಡಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.
Advertisement
Advertisement
ಚುನಾವಣೆಯಲ್ಲಿ 104 ಸ್ಥಾನ ಪಡೆದು ವಿರೋಧಿ ಪಕ್ಷದ ಸ್ಥಾನದಲ್ಲಿ ಕುಳಿತ್ತಿದ್ದೇವೆ. ಆದರೆ ಕುಮಾರಸ್ವಾಮಿ ಅವರು ಹಣೆಬರಹ ಕಾಂಗ್ರೆಸ್ ಮೇಲೆ ನಿಂತಿದೆ. ಅವರು ತಮ್ಮ ಮೈತ್ರಿ ಪಕ್ಷದೊಂದಿಗೆ ಚರ್ಚೆ ನಡೆಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ತೀರ್ಮಾನ ಪ್ರಕಟಿಸಬೇಕು. ರೈತರ ಸಾಲಮನ್ನಾ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
Advertisement
ನಿರಂತರ ಹೋರಾಟ ನಡೆಸುವ ಮೂಲಕ ರೈತರಿಗೆ ಜಾಗೃತಿ ಮೂಡಿಸಲಾಗುವುದು. ರೈತರು ಹೊಸ ಸಾಲ ಪಡೆಯಲು ಮಾಹಿತಿ ನೀಡಲಾಗುವುದು. ಯಾವುದೇ ಬ್ಯಾಂಕ್ ಸಾಲ ನೀಡಿ ಎಂದು ಕೇಳಿದರೆ ರಾಹುಲ್ ಗಾಂಧಿ, ಸಿದ್ದರಾಯ್ಯ, ಸಿಎಂ ಕುಮಾರಸ್ವಾಮಿ ಉತ್ತರ ಹೇಳಿಕೊಳ್ಳಲಿ. ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ. ಗೆಲ್ಲುವವರೆಗೆ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಅಧಿಕಾರಿಕ್ಕೆ ಬರುತ್ತಾರೆ. ಈ ವೇಳೆ 1 ಲಕ್ಷ ರೂ. ಸಾಲಮನ್ನಾ ಮಾಡಲಾಗುತ್ತದೆ. ಕುಮಾರಸ್ವಾಮಿ ಅಳುವುದರಿಂದ ಅಥವಾ ಹುಸಿನಗುವಿನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.