ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ (Praveen Shetty) ಅವರ ಮಗ ಪ್ರವೀರ್ ಶೆಟ್ಟಿ (Praveer Shetty) ಸ್ಯಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿರುವುದು ನಿಮಗೆಲ್ಲಾ ಗೊತ್ತೆ ಇದೆ. ಪ್ರವೀರ್ ನಟನೆಯ ‘ಸೈರನ್’ (Siren) ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಗೀತೆಗೆ ಯುವ ಪ್ರತಿಭೆ ಚಿನ್ಮಯ ಸಾಹಿತ್ಯ ಬರೆದಿದ್ದಾರೆ. ‘ಮೈ ಆಟೋಗ್ರಾಫ್’ ಖ್ಯಾತಿಯ ಭಾರತ್ವಾಜ್ ಸಂಗೀತ ಸಂಯೋಜಿಸಿರುವ ‘ಎಣ್ಣೆ ಹೊಡೆಯೋ ಟೈಮಲ್ಲಿ …’ ಸಾಂಗ್‌ನ್ನು (Song) ಮಂಗ್ಲಿ (Mangli) ಹಾಡಿದ್ದಾರೆ. ಲಹರಿ ಯೂಟ್ಯೂಬ್‌ನಲ್ಲಿ ಗೀತೆ ರಿಲೀಸ್ ಆಗಿದ್ದು, ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಹರಿ ವೇಲು ‘ಇದು ಪ್ರವೀರ್ ಶೆಟ್ಟಿ ಅವರ ಮೊದಲ ಸಿನಿಮಾ ಆಗಿದ್ದು, ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ಹಾಡು ಚನ್ನಾಗಿ ಬಂದಿದೆ. ಜಾನಪದ ಸೊಗಡಿನ ಮೂಲದಿಂದ ಬಂದಂತ ಸಿಂಗರ್‌ಗಳು ಹಾಡಿರುವ ಗೀತೆಗಳು ಚನ್ನಾಗಿರುತ್ತವೆ. ಹಾಗೆಯೇ ಮಂಗ್ಲಿ ಕೂಡ ಜಾನಪದ ಮೂಲದಿಂದ ಬಂದವರು. ತಾಂತ್ರಿಕವಾಗಿ ಸಿನಿಮಾ ಸ್ಟ್ರಾಂಗ್ ಆಗಿ ಬಂದಿದೆ’ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ತಂಡಕ್ಕೆ ಶುಭ ಹಾರೈಸಿದರು.
Advertisement
ಅಂದಂಗೆ ಈ ಚಿತ್ರವನ್ನು ಮೂಲತಃ ತಮಿಳುನಾಡಿನವರಾದ ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ರಾಜಾ ವೆಂಕಯ್ಯ ಕನ್ನಡ ಕಲಿತು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿರುವುದು ವಿಶೇಷ. ಇದು ಅವರು ನಿರ್ದೇಶನದ ಮೊದಲ ಕನ್ನಡ ಸಿನಿಮಾ. “ಸೈರನ್’ ಚಿತ್ರದ ಕೆಲಸಗಳು ಈಗಾಗಲೇ ಮುಗಿದಿದ್ದು, ಫೆಬ್ರವರಿ ಮೂರನೇ ವಾರದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈ ಸಿನಿಮಾವನ್ನು ನಾವು ಕನ್ನಡ ಮತ್ತು ತಮಿಳುನಲ್ಲಿ ಶೂಟ್ ಮಾಡಿದ್ದು, ತೆಲುಗು ಮತ್ತು ಮಲಯಾಳಂಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದೇವೆ. ನನ್ನ ಮೊದಲ ಚಿತ್ರಕ್ಕೆ ‘ಡೆಕ್ಕನ್ ಕಿಂಗ್’ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿರುವ ಬಿಜ್ಜು ಶಿವಾನಂದ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಮೂಲತಃ ನಾನು ಸಂಕಲನಕಾರನಾಗಿ ಸಾಕಷ್ಟು ಸಿನಿಮಾಗೆ ಕೆಲಸ ಮಾಡಿದ್ದೇನೆ. ಇದೊಂದು ಇನ್ವೆಸ್ಟಿಗೇಷನ್ ಮರ್ಡರ್ ಮಿಸ್ಟರಿ ಕಥೆ ಹೊಂದಿದ್ದು, ಇಲ್ಲಿ ನಾಯಕ ಪ್ರವೀರ್ ಯಂಗ್ ಆ್ಯಂಡ್ ಯನರ್ಜಿ ಇರುವ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡಿದ್ದಾರೆ’ ಎಂದು ಹೇಳಿದರು. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ
Advertisement
Advertisement
ನಂತರ ಮಾತನಾಡಿದ ಚಿತ್ರದ ನಾಯಕ ಪ್ರವೀರ್ ಶೆಟ್ಟಿ ‘ನಾನು ಇದರಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಬಾಂಬೆಯ ಅನುಪಮ್ ಖೇರ್ ಟ್ರೈನಿಂಗ್ ಶಾಲೆಯಲ್ಲಿ ತರಬೇತಿ ಪಡೆದಿದ್ದು, ಈ ಚಿತ್ರದಲ್ಲಿ ಯಂಗ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡಿದ್ದೇನೆ’ ಎಂದರು. ಮಲಯಾಳಂ ಮೂಲದ ನಾಯಕಿ ಲಾಸ್ಯ ‘ಇದು ನನ್ನ ಅಭಿನಯದ ಮೊದಲ ಸಿನಿಮಾ. ಚಿತ್ರತಂಡ ಒಳ್ಳೆ ಅವಕಾಶ ಕೊಟ್ಟಿದ್ದು, ಇದರಲ್ಲಿ ನಾನೂ ಕೂಡ ಪೋಲಿಸ್ ಆಫೀಸರ್ ಪಾತ್ರ ಮಾಡಿದ್ದೇನೆ’ ಎನ್ನುವರು. ಹೋಟೆಲ್ ಉದ್ಯಮ ನಡೆಸುತ್ತಿರುವ ಚಿತ್ರದ ನಿರ್ಮಾಪಕ ಬಿಜ್ಜು ಶಿವಾನಂದ್ ಮಾತನಾಡಿ ‘ಈ ಚಿತ್ರವನ್ನು ನಾವು ಗೆಳೆಯರು ಸೇರಿ ಕಷ್ಟಪಟ್ಟು ಮಾಡಿದ್ದೇವೆ. ಈ ಸಿನಿಮಾಗಾಗಿ ಎರಡು ವರ್ಷ ಶ್ರಮ ಹಾಕಲಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಗನ ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ‘ಮೈ ಆಟೋಗ್ರಾಫ್’ ಖ್ಯಾತಿಯ ಭಾರದ್ವಾಜ್ ಸಂಗೀತ, ನಾಗೇಶ್ ಆಚಾರ್ ಛಾಯಾಗ್ರಹಣ, ಕಲೈ ಮಾಸ್ಟರ್ ನೃತ್ಯವಿದೆ. ಚಿತ್ರವನ್ನು ಲಿಖಿತ್ ಫಿಲ್ಮಸ್‌ನ ರಮೇಶ್ ಬಾಬು ವಿತರಣೆ ಮಾಡಲಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k