ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ಅರೆಸ್ಟ್

Advertisements

ಬೆಂಗಳೂರು: ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬ ಕಾರಿನಲ್ಲಿ ವೇಗವಾಗಿ ಬಂದು ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಕತ್ರಿಗುಪ್ಪೆ ಬಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಪಾದಾಚಾರಿ ನಾವನ್ನಪ್ಪಿದ್ದಾನೆ.

Advertisements

ಶುಕ್ರವಾರ ಶೂಟಿಂಗ್ ಮುಗಿಸಿಕೊಂಡು ಬನಶಂಕರಿ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬಂದ ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಮುಖೇಶ್, ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಚಿಮ್ಮಿದ್ದಾರೆ. ಮಾತ್ರವಲ್ಲದೇ ಸ್ಥಳದಲ್ಲೇ ಇದ್ದ ಇನ್ನೊಂದು ಕಾರು ಹಾಗೂ ಬೈಕಿಗೂ ಡಿಕ್ಕಿಯಾಗಿದೆ. ಇದನ್ನೂ ಓದಿ: ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

Advertisements

ಇಟ್ಟಮಡು ಬಳಿ ಇಳಿಜಾರು ಇದ್ದ ಕಾರಣ ಕಾರು ವೇಗವಾಗಿ ಬಂದು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುರೇಶ್ ಮೃತಪಟ್ಟಿದ್ದು, ಕಾರು ಚಾಲಕ ಮುಖೇಶ್ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯೇ ಕಾರಣ ಎಂದು ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಶಾಸಕರೇ ಉದ್ಘಾಟಿಸಬೇಕೆಂದು ರಸ್ತೆಗೆ ಬೇಲಿ- ಸ್ಥಳೀಯರಿಂದ ತೆರವು

ಗಾಯಾಳುಗಳಲ್ಲಿ ಮೂವರು ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚಾಲಕ ಮುಖೇಶ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisements
Advertisements
Exit mobile version