– ಇಬ್ಬರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಗೆ ತೀವ್ರ ಗಾಯ
ವಾಷಿಂಗ್ಟನ್: ಶ್ವೇತಭವನದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ (White House Shooting) ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಟ್ರಂಪ್ ಸೂಚಿಸಿದ್ದಾರೆ.
Effective immediately, processing of all immigration requests relating to Afghan nationals is stopped indefinitely pending further review of security and vetting protocols.
The protection and safety of our homeland and of the American people remains our singular focus and…
— USCIS (@USCIS) November 27, 2025
ಭದ್ರತಾ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬ್ರೌಸರ್ ತಿಳಿಸಿದ್ದಾರೆ. ಇದನ್ನೂ ಓದಿ: Hong Kong Fire | 2,000 ಅಪಾರ್ಟ್‌ಮೆಂಟ್ಸ್ ಇರುವ 7 ಗಗನಚುಂಬಿ ಕಟ್ಟಡಗಳು ಬೆಂಕಿಗಾಹುತಿ; ಸಾವು 44ಕ್ಕೆ ಏರಿಕೆ!
ದಾಳಿಯ ಉದ್ದೇಶ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಯಾವುದೋ ಮೂಲೆಯಿಂದ ದಿಢೀರ್ ಎಂದು ಕಾಣಿಸಿಕೊಂಡ ಶಂಕಿತ, ತಕ್ಷಣವೇ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಗುಂಡಿನ ಸದ್ದು ಕೇಳುತ್ತಿದ್ದಂತೆ, ಆ ಪ್ರದೇಶದಲ್ಲಿದ್ದ ಇತರ ಸಿಬ್ಬಂದಿ ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಜೆಫ್ರಿ ಕ್ಯಾರೊಲ್ ತಿಳಿಸಿದ್ದಾರೆ.
ಆ ಪ್ರಾಣಿ ದುಬಾರಿ ಬೆಲೆ ತೆರಬೇಕಾಗುತ್ತೆ
ಇನ್ನೂ ಶ್ವೇತಭವನದ ಬಳಿ ಗುಂಡಿ ದಾಳಿ ನಡೆದ ಘಟನೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರಾಣಿ ಶೀಘ್ರದಲ್ಲೇ ದುಬಾರಿ ಬೆಲೆ ತೆರಬೇಕಾಗುತ್ತೆ ಅಂತ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Explainer: ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ – ಭಾರತಕ್ಕೂ ಬಂತು ಹೊಗೆ ಬೂದಿ
ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನ ಎರಡು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೇನೆ ಇರಲಿ, ದಾಳಿ ನಡೆಸಿದ ಪ್ರಾಣಿ ಶೀಘ್ರದಲ್ಲೇ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶ ನಮ್ಮದು – ಭಾರತದ ಮಹಿಳೆ ಬಂಧನದ ಬಳಿಕ ಚೀನಾಗೆ ಭಾರತ ಖಡಕ್ ಉತ್ತರ


