ಚಾಮರಾಜನಗರ: ಶ್ರೀ ವೀರಭದ್ರೇಶ್ವರ (Sri Veerabhadreshwara Rathotsava) ರಥೋತ್ಸವದ ವೇಳೆ ರಥದ ಚಕ್ರ ಮುರಿದು ಬಿದಿದ್ದು, ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.
ಹೌದು, ಇಂದು ಚಾಮರಾಜನಗರ ತಾಲೂಕಿನ ಚನ್ನಪ್ಪನಪುರದ (Channappapura) ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆಯುತ್ತಿತ್ತು. ಈ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಭಕ್ತರು ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುತ್ತಾ ರಥವನ್ನು ಎಳೆಯುತ್ತಿದ್ದರು. ಈ ವೇಳೆ ಏಕಾಏಕಿ ರಥದ ಚಕ್ರ ಮುರಿದಿದೆ. ಇದನ್ನು ನೋಡಿದ ಜನರು ರಥದಿಂದ ದೂರ ಓಡಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ರಥ ಕೆಳಗೆ ಬಿದ್ದಿದೆ. ಭಕ್ತರು ರಥ ಬೀಳುವುದನ್ನು ಮೊದಲೇ ಗಮನಿಸಿ ದೂರು ಓಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗದ್ದೆಯಲ್ಲಿ ಎಸೆದ – ಆರೋಪಿ ಅರೆಸ್ಟ್
Advertisement
Advertisement
ರಥದ ಚಕ್ರ ಮುರಿದಾಗ ಕೂಡಲೇ ರಥ ಒಂದೇ ಕಡೆಗೆ ಬಾಗಿದೆ. ಕೂಡಲೇ ಸ್ಥಳದಲ್ಲಿದ್ದವರು ರಥದ ಪಕ್ಕದಲ್ಲಿದ್ದ ಭಕ್ತರನ್ನು ದೂರ ಕಳಿಸಿದ್ದಾರೆ. ಈ ವೇಳೆಗೆ ರಥ ಒಮ್ಮೆಲೆ ನೆಲಕ್ಕಪ್ಪಳಿಸಿದೆ. ಸ್ಥಳದಲ್ಲಿದ್ದ ಭಕ್ತರು ಸ್ವಲ್ಪ ಯಾಮಾರಿದ್ರೂ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಆದರೆ ಭಕ್ತರು ರಥ ಬೀಳುವುದನ್ನು ನೋಡಿ ತಕ್ಷಣವೇ ದೂರ ಹೋಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ನಾವೆಲ್ಲ ದೇವರ ದಯೆಯಿಂದ ಪಾರಾಗಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ರಥೋತ್ಸವಕ್ಕೂ ಮುಂಚೆ ರಥದ ಚಕ್ರವನ್ನು ಪರಿಶೀಲನೆ ಮಾಡಿದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಒಟ್ಟಾರೆ ರಥ ಮುರಿದು ಬಿದ್ದರೂ ಸಹ ಪ್ರಾಣಾಪಾಯವಿಲ್ಲದೇ ಭಕ್ತರು ಪಾವಾಡ ಎಂಬಂತೆ ಪಾರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲಲು ಭಾರತ ಬಂದಿದೆ, ನಾವಲ್ಲ – ಭಾರತವನ್ನು ಸೋಲಿಸುತ್ತೇವೆ ಎಂದ ಹಸನ್