ಚಾಮರಾಜನಗರ: ಗರ್ಭಿಣಿ ಪತ್ನಿಗೆ(Pregnant Wife) ಜ್ಯೂಸ್‍ನೊಂದಿಗೆ ಮದ್ಯ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಂದಿದ್ದ ಪತಿಗೆ ಚಾಮರಾಜನಗರ(Chamarajanagara) ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ(Life imprisonment) ವಿಧಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿನಗರದ ಮುತ್ತುರಾಜ್ ಶಿಕ್ಷೆಗೊಳಗಾಗಿರುವ ಅಪರಾಧಿ. ಕಳೆದ 2013ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ(B.S.Bharathi) ಅವರು ಮುತ್ತುರಾಜ್‍ಗೆ(Mutturaj) ಜೀವಾವಧಿ ಶಿಕ್ಷೆ ಮತ್ತು 2.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
Advertisement
Advertisement
ಮುತ್ತುರಾಜ್ ಟ್ರಾಕ್ಟರ್ ಚಾಲಕನಾಗಿದ್ದು, ಅದೇ ಗ್ರಾಮದ ಜ್ಯೋತಿ(Jyothi) ಎಂಬ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಬಳಿಕ, ತಗಾದೆ ತೆಗೆದು ಪತ್ನಿ ಜೊತೆ ನಿತ್ಯ ರಂಪಾಟ ಮಾಡುತ್ತಿದ್ದ. ಈ ಮಧ್ಯೆ ಜ್ಯೋತಿ 3 ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿರುವುದರಿಂದ ತವರು ಮನೆಗೆ ಹೋಗಿ ಬಾರೋಣಾ ಎಂದು ಪುಸಲಾಯಿಸಿ ಬೈಕಿನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ್ಯೂಸ್(Juice) ನೊಟ್ಟಿಗೆ ಮದ್ಯ(Liquor) ಸೇರಿಸಿ ಕುಡಿಸಿ ಬಳಿಕ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದನು.
Advertisement
Advertisement
ಗುರುತು ಪತ್ತೆಯಾಗದಿರಲೆಂದು ಎಡಕೆನ್ನೆಯನ್ನೇ ಸುಟ್ಟು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುತ್ತುರಾಜ್‍ನನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಿರಂತರ ವಿಚಾರಣೆ ನಡೆದು ಮುತ್ತುರಾಜ್‍ನ(Mutturajan) ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು(Judge) ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಟಿ.ಹೆಚ್.ಲೋಲಾಕ್ಷಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರು ಹತ್ಯೆ