ಬೆಂಗಳೂರು: ಒಂದೇ ಜಾಗದಲ್ಲಿ ಬೊಲೆರೋ ಪಿಕಪ್ ಗೆ ಪದೇ ಪದೇ ಅಪಘಾತವಾಗಿದ್ದು, ವಾಹನದ ಮಾಲೀಕನಿಗೆ ಆತ್ಮದ ಭಯ ಕಾಡುತ್ತಿರುವ ವಿಚಿತ್ರ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿ ಹಾಲ್ ಬಳಿ ಈ ಘಟನೆ ನಡೆದಿದ್ದು, ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲೇ ಈ ವಾಹನ ಅಪಘಾತವಾಗಿತ್ತು. ಇದೀಗ ಮತ್ತೆ ಅದೇ ವಾಹನ, ಅದೇ ಜಾಗದಲ್ಲಿ ಮತ್ತೆ ಅಪಘಾತಕ್ಕೀಡಾಗಿದ್ದು, ಮುಂದಿನ ದಿನಗಳಲ್ಲಿ ಜ್ಯೋತಿಷಿಗಳ ಮೊರೆ ಹೋಗಲು ಚಿಂತಿಸಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಬೊಲೆರೋ ಪಿಕಪ್ ಮಾಲೀಕ ಮಂಡ್ಯದ ಅಶ್ವಥ್ ಮಾತನಾಡಿ, ಇದೇ ವಾಹನಕ್ಕೆ ಇದೇ ಜಾಗದಲ್ಲಿ 2 ಬಾರಿ ಅಪಘಾತ ನಡೆದಿದೆ. ಗಾಡಿಯ ಆಕ್ಸೆಲ್ ಕಟ್ ಆಗಿರುವುದರಿಂದ ಗಾಡಿಯನ್ನು ಸೈಡ್ ಗೆ ಹಾಕಿರುತ್ತೇವೆ. ಹೈವೇ ಆದ್ದರಿಂದ ಅತೀವೇಗವಾಗಿ ಬರುವ ವಾಹನಗಳು ನಿಂತಿದ್ದ ಗಾಡಿಗೆ ಡಿಕ್ಕಿ ಹೊಡೆಯುತ್ತವೆ. ಇದು ಯಾವತ್ತೂ ಬಹಳ ಡೇಂಜರಸ್ ಸ್ಪಾಟ್ ಆಗಿದೆ. ಕಳೆದ ಬಾರಿ ಆಡಿ ಕಾರ್ ಹೊಡೆದಿತ್ತು. ಈ ಬಾರಿ ಈಚರ್ ಲಾರಿ ಡಿಕ್ಕಿ ಹೊಡೆದಿದೆ. ಮುಂದಿನ ದಿನಗಳಲ್ಲಿ ಜ್ಯೋತಿಷಿಗಳ ಮೊರೆ ಹೋಗುವುದಾಗಿ ತಿಳಿಸಿದ್ರು.
Advertisement
Advertisement
ಈಚರ್ ಲಾರಿ ಚಾಲಕ ಈ ಬಗ್ಗೆ ಮಾತನಾಡಿ, ರಾತ್ರಿ 3.30ರ ಸುಮಾರಿಗೆ ಬರುತ್ತಿದ್ದೆ. ನನ್ನ ಬದಿಯಲ್ಲೇ ಮೂರನೇ ಲೈನ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ಇತ್ತು. ನಾನು 40ರ ಸ್ಪೀಡ್ ನಲ್ಲಿದ್ದೆ. ಕೆಎಸ್‍ಆರ್ ಟಿಸಿ ವಿರುದ್ಧ ದಿಕ್ಕಿನಲ್ಲಿ ಸ್ಪೀಡಾಗಿ ಬರುತ್ತಿತ್ತು. ಹೀಗಾಗಿ ನಾನು ಬಲಬದಿಗೆ ಹೋದ್ರೆ ಬಸ್ ಗೆ ತೊಂದರೆಯಾಗುತ್ತದೆ ಅಂತ ಹೇಳಿ ನಿಂತಿರೋ ಬೊಲೆರೋ ಪಿಕಪ್ ಗಾಡಿಗೆ ಬಂದು ನನ್ನ ಗಾಡಿ ಗುದ್ದಿತ್ತು. ಇದೇ ಗಾಡಿ 2 ಬಾರಿ ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿದೆ. ಮನೆಯಲ್ಲೇ ಗಾಡಿ ನಿಲ್ಲಿಸಿದ್ರೆ ಅಪಘಾತವಾಗಲ್ಲ. ರಸ್ತೆಗಿಳಿದ ಬಳಿಕ ಅಪಘಾತಕ್ಕೀಡಾಗೋದು. ಹೀಗಾಗಿ ಅಪಘಾತ ಆಗೋದು ಅನ್ನೋದು ಅಚಾನಕ್. ದೆವ್ವದ ಕಾಟದಿಂದ ಆಕ್ಸಿಡೆಂಟ್ ಆಗಿದೆ ಅನ್ನೋದನ್ನು ನಂಬಲ್ಲ ಅಂತ ಹೇಳಿದ್ರು.
ಇನ್ನು ಈ ಬಗ್ಗೆ ಸ್ಥಳೀಯರು ಮಾತನಾಡಿ, ಇದೇ ಜಾಗದಲ್ಲಿ ಇದೇ ಗಾಡಿ 2, 3 ಮೂರಿ ಅಪಘಾತವಾಗಿರೋದನ್ನು ಗಮನಿಸಿದ್ದೇನೆ. ಕಳೆದ ಬಾರಿ ವೈದ್ಯರು, ವಿದ್ಯಾರ್ಥಿಗಳು ಅವರಿಗೂ ಇದೇ ಜಾಗದಲ್ಲಿ ಅಪಘಾತವಾಗಿತ್ತು. ಪೈಂಟ್ ಗಾಡಿ, ಒಂದೆರಡು ಟ್ರಕ್, ಬಸ್ ಇವುಗಳೆಲ್ಲ ಇದೇ ಜಾಗದಲ್ಲಿ ಅಪಘಾತಕ್ಕೀಡಾಗಿದ್ದವು. ಒಟ್ಟಿನಲ್ಲಿ ಕೆಲವೊಂದು ಗಾಡಿಗಳಿಗೆ ಇಲ್ಲಿ ಆಕ್ಸಿಡೆಂಟ್ ಫಿಕ್ಸ್ ಆಗಿದೆ. ಸುಮಾರು ವರ್ಷದಿಂದ ಇಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಹೀಗಾಗಿ ಇಲ್ಲಿ ಏನೋ ಒಂದು ಇರಬೇಕು. ತಿಂಗಳಿಗೆ 2, 3 ಅಪಘಾತಗಳು ನಡೆದೇ ನಡೆಯುತ್ತವೆ. ಏನೂ ಇಲ್ಲವಾದ್ರು ಒಂದು ಹಸು ಅಡ್ಡ ಬಂದಾದ್ರೂ ಒಂದು ಆಕ್ಸಿಡೆಂಟ್ ಆಗಿಯೇ ಆಗುತ್ತದೆ ಅಂತ ಅವರು ತಿಳಿಸಿದ್ರು.
https://www.youtube.com/watch?v=RwFfmaQHJi0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv