ದಾವಣಗೆರೆ: ನಗರದ ಬಾರ್ ವೊಂದರ ಮುಂಭಾಗದಲ್ಲಿ ಪತ್ತೆಯಾಗಿದ್ದ ರಾಶಿಗಟ್ಟಲೆ ಆಧಾರ್ ಕಾರ್ಡ್ ಕುರಿತು ಪಬ್ಲಿಕ್ ಟಿವಿ ವಿಸ್ತೃತವಾಗಿ ವರದಿ ಮಾಡಿತ್ತು. ಸದ್ಯ ವರದಿಯ ಬಳಿಕ ಎಚ್ಚೆತ್ತುಕೊಂಡ ಅಂಚೆ ಇಲಾಖೆ ಅಧಿಕಾರಿಗಳು ಘಟನೆ ಕುರಿತು ತನಿಖೆ ಆದೇಶ ನೀಡಿದ್ದಾರೆ.
ನಗರದ ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ಮುಂಭಾಗ ಆಧಾರ್ ಕಾರ್ಡ್ ಗಳು ಪತ್ತೆಯಾಗಿದ್ದವು. ಈ ವೇಳೆ ನಕಲಿ ಆಧಾರ ಕಾರ್ಡ್ ಜಾಲ ಇರುವ ಬಗ್ಗೆ ಸಾರ್ವಜನಿಕರಿಂದ ಶಂಕೆ ವ್ಯಕ್ತವಾಗಿತ್ತು. ಸಾರ್ವಜನಿಕ ಶಂಕೆಯ ಹಿನ್ನೆಲೆಯಲ್ಲಿ ಸದ್ಯ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
Advertisement
ಬಾರ್ ಮುಂದೇ ಕಂಠ ಪೂರ್ತಿ ಕುಡಿದು ಬಿದ್ದಿದ್ದ ವ್ಯಕ್ತಿಯೊಬ್ಬರ ಚೀಲದಿಂದ ಆಧಾರ್ ಕಾರ್ಡ್ ಗಳು ಬಾರ್ ಮುಂದೇ ಬಿದ್ದಿದ್ದವು. ಸದ್ಯ ಆ ವ್ಯಕ್ತಿ ಅಂಚೆ ಇಲಾಖೆಯ ಸಿಬ್ಬಂದಿಯ ಅಥವಾ ಬೇರೆ ವ್ಯಕ್ತಿಯ ಎಂದು ಅಂಚೆ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾರ್ ಮುಂಭಾಗ ಸಿಕ್ಕ 37 ಆಧಾರ್ ಕಾರ್ಡ್ ಗಳಲ್ಲಿ ಒಂದಕ್ಕೆ ಮಾತ್ರ ಪೋಸ್ಟಲ್ ಸ್ಟಾಂಪ್ ಹಚ್ಚಿದ್ದು ಕಂಡು ಬಂದಿದೆ. ಆಧಾರ್ ಕಾರ್ಡ್ ಹಂಚಿಕೆ ಮಾಡುವ ಮುನ್ನ ಅಕ್ರಮ ನಡೆದಿರಬಹುದು ಎಂದು ಸದ್ಯ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ತನಿಖೆ ನಡೆದ ಬಳಿಕವೇ ಘಟನೆ ಹಿಂದಿನ ಸತ್ಯತೆ ಬಯಲಿಗೆ ಬರಲಿದೆ.