ಧಾರವಾಡ: ವಸಂತಋತು ಬಂದಾಗ ಕಾಗೆ, ಕೋಗಿಲೆ ಯಾವುದು ಗೊತ್ತಾಗುತ್ತೆ ಎಂದು ಪಂಚಮಸಾಲಿ ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
Advertisement
ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಧಾರವಾಡದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದ್ದು, 3ನೇ ಪೀಠ ನಮ್ಮ ಸಾನ್ನಿಧ್ಯದಲ್ಲಿಯೇ ಆಗುತ್ತಿದೆ. ಅದು ಸಹ ನಮ್ಮದೇ ಪೀಠ. 3-4ನೇ ಪೀಠ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ ಮಾತ್ರ ಎಂದು ವಿವರಿಸಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ – ರಜೆ ಫೋಷಿಸಿದ ಮಹಾರಾಷ್ಟ್ರ ಸರ್ಕಾರ!
Advertisement
Advertisement
ನಮ್ಮ ದೃಷ್ಟಿಯಲ್ಲಿ ಒಂದು-ಎರಡನೇ ಪೀಠ ಅಂತಿಲ್ಲ. ಸಂಘಟನೆ ದೃಷ್ಟಿಯಿಂದ ಆ ಪೀಠ ಆಗುತ್ತಿದೆ ಎಂದ ಅವರು, ಲಕ್ಷಾಂತರ ಭಕ್ತರ ಹಿತದೃಷ್ಟಿಯಿಂದ ಆ ಪೀಠ ನಡೆಯುತ್ತಿದೆ. ಪೀಠಾಧಿಪತಿ ಸಹ ಪಂಚಮಸಾಲಿ ಸ್ವಾಮೀಜಿಗಳೇ ಎಂದು ತಿಳಿಸಿದರು.
Advertisement
ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಅವರ ವಿಚಾರ ಹೇಳುವ ಹಕ್ಕು ಇದೆ. ವಸಂತಋತು ಬಂದಾಗ ಕಾಗೆ, ಕೋಗಿಲೆ ಯಾವುದು ಗೊತ್ತಾಗುತ್ತೆ. ಆ ವಸಂತ ಋತುವಿಗಾಗಿ ನೀವು ಕಾಯಿರಿ ಎಂದರು. ಪಂಚಮಸಾಲಿ ಸಮಾಜಕ್ಕೆ ಶಕ್ತಿ ತುಂಬಲು ಹರಿಹರ ಪೀಠ ಆಗಿತ್ತು. ಅದರ ಜೊತೆಗೆ ಈಗ ಈ ಪೀಠ ಎಂದ ಅವರು, ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅದಕ್ಕೆ ಪೀಠಾಧಿಪತಿ ಆಗುತ್ತಾರೆ. ನಾವು ಕಟ್ಟುವವರು, ಬೆಳೆಸುವವರು ಹೇಳಿದರು. ಇದನ್ನೂ ಓದಿ: ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!
ಪೀಠ ಹೆಚ್ಚಾದ ಮೇಲೆ ಭಕ್ತರ ಸಂಖ್ಯೆ ಕಡಿಮೆಯಾಗುತ್ತೆಂಬ ಭಯ ನಮಗಿಲ್ಲ. ಪ್ರಾಂತ್ಯವಾರು ಪೀಠ ಮತ್ತು ಸಂಘಟನೆ ಮಾತ್ರ ನಮ್ಮ ಮೂಲ ಉದ್ದೇಶ ಎಂದು ವಿವರಿಸಿದರು.