Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

Public TV
3 Min Read
Vinay Gowda 3

ವಿನಯ್ (Vinay) ಮೊದಲ ಬಾರಿ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್‌ನಿಂದ (Bigg Boss Kannada) ಹೊರ ಬಂದ ಮೇಲೆ ಒಳಗಿದ್ದ ಸಂತಸ, ನೋವು, ಎಲ್ಲವನ್ನು ಹರವಿಟ್ಟಿದ್ದಾರೆ. ಗೆಲ್ಲಲೇಬೇಕೆಂದು ಅಖಾಡಕ್ಕೆ ಇಳಿದಿದ್ದ ಆನೆ ಈಗ ಏನನ್ನು ಹೇಳಿದ್ದಾರೆ ? ಯಾರನ್ನು ದೂರಿದ್ದಾರೆ ? ಯಾರನ್ನು ಹತ್ತಿರ ಬಿಟ್ಟುಕೊಂಡಿದ್ದಾರೆ ? ಸುದೀಪ್, ಸಂಗೀತಾ ಸೇರಿದಂತೆ ಎಲ್ಲರ ಬಗ್ಗೆ ಏನೇನು ಅನಿಸಿಕೆ ಹರವಿಟ್ಟಿದ್ದಾರೆ ? ಅದರ ಎಕ್ಸ್ ಕ್ಲ್ಯೂಸಿವ್  ಮಾಹಿತಿ ಇಲ್ಲಿದೆ.

Vinay 3
ಆನೆ ಘೀಳಿಟ್ಟಿದೆ. ಅಫ್‌ಕೋರ್ಸ್ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಆನೆ ಸುಮ್ಮನಿರಲಿಲ್ಲ. ಆಟ ಆಡುತ್ತಾ ಆಡುತ್ತಾ ರೊಚ್ಚೆಗೇಳುತ್ತಿದ್ದರು. ಸೇಮ್ ಟೈಮ್ ಇನ್ನೊಬ್ಬರನ್ನು ಅದೇ ರೀತಿ ಕೆಣಕುತ್ತಿದ್ದರು. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿರಲಿಲ್ಲ. ಆದರೆ ಕೆಲವರು ಹಾಗಂದುಕೊಂಡರು. ಏನಾದರೂ ಆಗಲಿ, ಕೊನೆಗೂ ಬಿಗ್‌ ಬಾಸ್ ಟಾಪ್ ಫೈವ್ ಸ್ಪರ್ಧಿಗಳಲ್ಲಿ ಒಬ್ಬರಾದರು. ಕರುನಾಡಿನಿಂದ ಶಬ್ಬಾಶ ಎನಿಸಿಕೊಂಡರು. ದಟ್ ಈಸ್ ವಿನಯ್ ಪವರ್.

Vinay Gowda 2

ಬಿಗ್‌ ಬಾಸ್ ಮನೆಯಲ್ಲಿ ವಿನಯ್ ಕೊನೇವರೆಗೂ ಇದ್ದರು. ಆರಂಭದಲ್ಲಿ ಇವರು ಅಷ್ಟು ದಿನ ಇರುವುದಿಲ್ಲ ಎಂದು ಎಲ್ಲರೂ ತಿಳಿದಿದ್ದರು. ಆದರೆ ಆ ನಂಬಿಕೆಯನ್ನು ಆನೆ ಸುಳ್ಳು ಮಾಡಿತು. ದಿನ ದಿನಕ್ಕೆ ಇವರು ಜನರ ಮೆಚ್ಚುಗೆ ಪಡೆಯುತ್ತಾ ಹೋದರು. ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿದರು. ಅಷ್ಟೇ ಅಲ್ಲ, ಇನ್ನೇನು ಟ್ರೋಫಿ ಇವರ ಕೈಗೆ ಕಿಚ್ಚ ಕೊಡುತ್ತಾರೆ ಎಂದು ಅಂದುಕೊಂಡಿದ್ದರು ಜನರು. ಆದರೆ ಹಾಗಾಗಲಿಲ್ಲ. ಅದಕ್ಕೆ ವಿನಯ್‌ಗೆ ಬೇಸರ ಅಗುಳಿನಷ್ಟೂ ಇಲ್ಲ. ಕಾರಣ ನಾಡಿನ ತುಂಬಾ ಸಿಕ್ಕ ಪ್ರೀತಿ ಹಾಗೂ ಗೌರವ.

Vinay Gowda 1 1

ವಿನಯ್ ಮೊದಲಿಂದಲೂ ಯಾರ ಮುಲಾಜಿಗೂ ಬೀಳಲಿಲ್ಲ. ಯಾರ ಜೊತೆಯೂ ಹೀಗೆ ಇರಬೇಕೆಂದು ನಾಟಕ ಮಾಡಲಿಲ್ಲ. ನಾನು ಇರುವುದೇ ಹೀಗೆ. ಇದೇ ರೀತಿ ಆಡುತ್ತೇನೆ ಎನ್ನುತ್ತಲೇ ಎಲ್ಲರ ಮನಸನ್ನು ಗೆದ್ದರು. ಅಫ್‌ಕೋರ್ಸ್ ಇದನ್ನೇ ಸ್ಪರ್ಧಿಗಳಿಗೆ ಹೇಳಲು ಬರುವುದಿಲ್ಲ. ಯಾಕೆಂದರೆ ಸಂಗೀತಾ ಹಾಗೂ ವಿನಯ್ ಬಿಗ್‌ಬಾಸ್‌ಗೆ ಬರುವ ಮುನ್ನವೇ ಜತೆಯಾಗಿ ಕೆಲಸ ಮಾಡಿದ್ದರು. ಆದರೆ ಮನೆ ಒಳಗೆ ಕಾಲಿಟ್ಟಾಗ ಇಬ್ಬರೂ ವೈರಿಗಳು ಅನ್ನೋ ರೀತಿ ವರ್ತಿಸಲು ಆರಂಭಿಸಿದರು. ಅದಕ್ಕೆ ಕಾರಣ ಏನು?

vinay gowda

ಸಂಗೀತಾ ಹಾಗೂ ವಿನಯ್ ಒಂದು ಮನೆಯಲ್ಲಿ ಅಲ್ಲ. ಒಂದು ಊರಿನಲ್ಲಿ ಇರಲೂ ಸಾಧ್ಯ ಇಲ್ಲ. ಆ ಮಟ್ಟಕ್ಕೆ ಇಬ್ಬರೂ ಹಲ್ಲಲ್ಲು ಕಡಿಯುತ್ತಿದ್ದರು. ಟಾಸ್ಕ್ಗಳಲ್ಲಿ ಇಬ್ಬರೂ ಅದು ಯಾವ ರೀತಿ ಹಾಕ್ಯಾಟಕ್ಕೆ ಬಿದ್ದಿದ್ದರೆಂದು ಎಲ್ಲರಿಗೂ ಗೊತ್ತು. ಬಳೆ ಟಾಸ್ಕ್ನಲ್ಲಂತೂ ಅದು ತಾರಕಕ್ಕೆ ಮುಟ್ಟಿತ್ತು. ಸುದೀಪ್ ಕೂಡ ಇವರ ನಡುವೆ ಎಂಟ್ರಿ ಕೊಡಬೇಕಾಯಿತು. ಸಂಗೀತ ವರ್ತನೆಯೇ ನನ್ನ ಹಾಗೂ ಅವರ ನಡುವೆ ಜಗಳಕ್ಕೆ ಬುನಾದಿ ಹಾಕಿತು ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ ವಿನಯ್. ಆನೆ.. ಇದು ಬಿಗ್‌ಬಾಸ್ ಮನೆಗೆ ಹೋದ ಮೇಲೆ ವಿನಯ್‌ಗೆ ಸಿಕ್ಕ ಬಿರುದು. ಮೊದಮೊದಲು ಅದನ್ನು ಪಾಸಿಟಿವ್ ಆಗಿಯೇ ಉಳಿದ ಸ್ಪರ್ಧಿಗಳು ಬಳಸಿಕೊಂಡರು. ವಿನಯ್ ಕೂಡ ಆನೆ ಪದವನ್ನು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತುಕೊಂಡರು. ಆದರೆ ದಿನ ಕಳೆದಂತೆ ಸ್ಪರ್ಧಿಗಳು ಆನೆಯನ್ನೇ ಟಾರ್ಗೆಟ್ ಮಾಡಿದರು. ಆ ಪದದಿಂದಲೇ ವಿನಯ್‌ರನ್ನು ಹಣಿಯಲು ಸಜ್ಜಾದರು. ಅದ್ಯಾಕೆ ಹಾಗಾಯಿತು? ಏನಾಯಿತು ? ಅದರಿಂದ ಒಳ್ಳೆಯದಾಯಿತಾ?

vinay gowda 3

ಇದೆಲ್ಲದರ ನಡುವೆ ವಿನಯ್ ಅದೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇವರನ್ನೇನೊ ಆನೆ ಎಂದು ಕರೆದು ಬಿಟ್ಟರು. ಇದನ್ನು ಜೀವನದ ಕೊನೆವರೆಗೂ ಉಳಿಸಿಕೊಳ್ಳುತ್ತೇನೆ ಎಂದೂ ವಿನಯ್ ಹೇಳಿದ್ದಾರೆ. ಆದರೆ ಈ ಆನೆಗೆ ನಿಜವಾದ ಮಾವುತ ಯಾರು? ಯಾರಿಂದ ವಿನಯ್ ಕೊನೇವರೆಗೂ ಆಟದಲ್ಲಿ ಉಳಿದರು, ಬೆಳೆದರು, ತಪ್ಪಿದ್ದಲ್ಲಿ ತಿದ್ದಿಕೊಂಡರು? ಅದಕ್ಕೆ ಉತ್ತರ ಒಂದೇ. ಅದೇ ಕಿಚ್ಚ ಸುದೀಪ್. ಆ ಮಹಾ ಮಾವುತ ಇದ್ದದ್ದಕ್ಕಾಗಿಯೇ ನಾನು ಕರುನಾಡನ್ನು ಗೆದ್ದಿದ್ದೇನೆ ಎನ್ನುತ್ತಾರೆ ವಿನಯ್.

Vinay Gowda 3

ಈ ಎಲ್ಲ ಕಿತ್ತಾಟ, ಜಗಳಾಟದ ನಡುವೆ ಅದೊಂದು ನೋವು ಇವರನ್ನು ಕಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಜೀವವನ್ನು ಹಿಂಡುತ್ತಿದೆ. ಅದೇನು ಗೊತ್ತೆ? ಬಿಗ್‌ ಬಾಸ್‌ನ ಟಾಪ್ 2 ಸ್ಥಾನದಲ್ಲಿ ನಾನೂ ಒಬ್ಬನಾಗಿರಬೇಕಿತ್ತು. ಅದೊಂದು ಕನಸು ಕಂಡಿದ್ದೆ. ಅದ್ಯಾಕೆ ಹಾಗಾಯಿತೊ ಗೊತ್ತಾಗಲಿಲ್ಲ. ಇದು ವಿನಯ್‌ರನ್ನು ಕಾಡುತ್ತಿರುವ ನೋವು. ಕೊನೇ ಇಬ್ಬರು ಸ್ಪರ್ಧಿಗಳಲ್ಲಿ ವಿನಯ್ ಖಂಡಿತ ಇರುತ್ತಾರೆ ಎಂದೇ ಜನರು ತಿಳಿದಿದ್ದರು. ಆದರೆ ಹಾಗಾಗಲಿಲ್ಲ.

 

ಇದು ವಿನಯ್ ಬಿಗ್‌ ಬಾಸ್ ಸೀಸನ್ 10ರ ಪಯಣ. ಇಲ್ಲಿಗೆ ಇದು ಮುಗಿದಿದೆ. ಆದರೆ ಈ ಅರಮನೆಯಿಂದ ವಿನಯ್ ಅನೇಕ ಸಂಗತಿಗಳನ್ನು ಹೊತ್ತುಕೊಂಡು ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಿಚ್ಚನ ಜೊತೆ ಬೆಳ್ಳಿ ತೆರೆ ಮೇಲೆ ಮೆರವಣಿಗೆ ಹೊರಟರೂ ಅಚ್ಚರಿ ಇಲ್ಲ. ಅದೊಂದು ಕನಸು ಈಗಲೂ ಇವರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಏನಾದರಾಗಲಿ ಬಿಗ್ ಆನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಸಾಹಸ ಮಾಡಲಿ. ಕರುನಾಡನ್ನು ಬೇರೊಂದು ರೀತಿ ಗೆದ್ದು ಬೀಗಲಿ.

Share This Article