ಲಕ್ನೋ: ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ (Ram Gopal Yadav) ಅವರು ಮಂಗಳವಾರ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ (Ayodhya Ram Mandir) ಬಗ್ಗೆ ಪ್ರತಿಕ್ರಿಯಿಸಿ ಭಾರೀ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನಮ್ಮ ದೇಶದಲ್ಲಿ ದೇವಸ್ಥಾನಗಳನ್ನು ಈ ರೀತಿ ನಿರ್ಮಿಸಿಲ್ಲ ಎಂದಿರುವ ಸಮಾಜವಾದಿ ಪಕ್ಷದ (Samajawadi Party) ಮುಖಂಡರು, ರಾಮ ಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಾನು ಪ್ರತಿದಿನ ರಾಮನನ್ನು ಆರಾಧಿಸುತ್ತೇನೆ. ಕೆಲವರು ರಾಮನವಮಿಯಂದು ಪೇಟೆಂಟ್ ಮಾಡಿದ್ದಾರೆ. ಆದರೆ ಅಯೋಧ್ಯೆಯಲ್ಲಿರುವ ಆ ದೇವಾಲಯವು ನಿಷ್ಪ್ರಯೋಜಕ ಆಗಿದೆ ಎಂದು ಹೇಳಿದ್ದಾರೆ.
ರಾಮ್ ಗೋಪಾಲ್ ಯಾದವ್ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ ಬ್ಯಾಂಕ್ ರಾಜಕೀಯಕ್ಕಾಗಿ ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ. ಅವರು ಯಾವಾಗಲೂ ರಾಮ ಮಂದಿರವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
Watch: BJP leader Shehzad Poonawalla reacts to SP Leader Ram Gopal Yadav's remarks on the Ram Mandir, says, "This statement, which hurts the faith of millions of Ram devotees and their unwavering belief, is insulting. This is the anti-Ram face of the Samajwadi Party." pic.twitter.com/4InoTrWYtc
— IANS (@ians_india) May 7, 2024
ಇಂಡಿಯಾ ಬ್ಲಾಕ್ ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರು ರಾಮಮಂದಿರದ ಬಗ್ಗೆ ಆಘಾತಕಾರಿ ಮತ್ತು ಅತ್ಯಂತ ಅವಮಾನಕರ ಕಾಮೆಂಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷವು ರಾಮಭಕ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಹೇಳಿಕೆಗಳಿಂದ ಇಂಡಿಯಾ ಒಕ್ಕೂಟ ಸನಾತನ ಧರ್ಮದ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಿಡಿಕಾರಿದ್ದಾರೆ.