Connect with us

Bengaluru City

ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

Published

on

ಬೆಂಗಳೂರು: ತನ್ನ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ನಾಡಿನಾದ್ಯಂತ ಇಂದು ಕ್ರಿಸ್ ಮಸ್ ಹಬ್ಬ ಆಚರಿಸುವ ದಿನವೂ ಬಂದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ಸೆಲ್ಫಿ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಯಶ್, ನನ್ನ ಪತ್ನಿಯೇ ನನಗೆ ಬೆಸ್ಟ್ ಸಾಂತಾ ಎಂದು ಹೇಳಿದ್ದಾರೆ.

ಪೋಸ್ಟ್ ನಲ್ಲೇನಿದೆ..?
ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನನ್ನ ಪತ್ನಿಯೇ ನನ್ನ ಬೆಸ್ಟ್ ಸಾಂತಾ ಹೇಳಿಕೊಂಡಿದ್ದಾರೆ. ಪುಟ್ಟ ಕಂದಮ್ಮಳನ್ನು ಉಡುಗೊರೆಯಾಗಿ ನೀಡಿ ಈ ಬಾರಿಯ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಸುಂದರವಾಗಿ ನನಗೆ ಆಚರಿಸಲು ಅವಕಾಶ ಮಾಡಿಕೊಟ್ಟ ನನ್ನ ಸಾಂತಾಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

ಮನೆಗೆ ಹೋಗೋದೆ ಖುಷಿ:
ತನ್ನ ಅಭಿನಯದ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮೂಲದ ಯೂ ಟ್ಯೂಬ್ ಚಾನೆಲ್ ನವರು ಯಶ್ ಅವರನ್ನು ವಿಡಿಯೋ ಮೂಲಕ ಸಂದರ್ಶನ ಮಾಡಿದ್ದರು.

ಈ ವೇಳೆ ರಾಕಿ, ಕೆಜಿಎಫ್ ಗಿಂತಲೂ ದೊಡ್ಡ ಖುಷಿ ನನಗೆ ಮನೆಗೆ ಹೋದಾಗ ಈಗ ಸಿಗ್ತಿದೆ. ‘ಕೆಲಸದ ಒತ್ತಡ ಎಷ್ಟೇ ಇದ್ದರೂ ಇದೀಗ ನನಗೆ ಮನೆಗೆ ಹೋಗೋದೆ ಒಂದು ಖುಷಿ. ಯಾಕಂದ್ರೆ ನನ್ನ ಮನೆಯಲ್ಲಿ ನನಗೋಸ್ಕರ ಒಬ್ಬಳು ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳೊಂದಿಗೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರವಾಗಿದೆ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ’ ಎಂದು ಯಶ್ ತಮ್ಮ ಮಗಳ ಬಗ್ಗೆ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

ಇದೇ ತಿಂಗಳ 2ರಂದು ಭಾನುವಾರ ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಹೆಣ್ಣು ಮಗುವಿನ ಸಂತಸದಲ್ಲಿರುವ ಹೊತ್ತಲ್ಲೇ ರಾಕಿಂಗ್ ಜೋಡಿಯ 2ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದಾದ ಬಳಿಕ ಇದೀಗ ಯಶ್ ಅಭಿನಯ ಕೆಜಿಎಫ್ ರಿಲೀಸ್ ಆಗಿದ್ದು, ಎಲ್ಲಡೆ ರಾಕಿ ಭಾಯ್ ಗೆ ಉಘೇ ಎನ್ನಲಾಗುತ್ತಿದೆ. ದೇಶ ಹಾಗೂ ಹೊರದೇಶದಲ್ಲಿ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ ಶಾರೂಖ್ ಅಭಿನಯದ ಝೀರೋ ಸಿನಿಮಾ ಕೂಡ ಅಂದೇ ತೆರೆಕಂಡಿದ್ದು, ಆದ್ರೆ ಝೀರೋವನ್ನು ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *