– ಅಯೋಧ್ಯೆಯಿಂದ ತವರು ನಾಡಿಗೆ ಮರಳಿದ ಅರುಣ್ ಯೋಗಿರಾಜ್
ಅಯೋಧ್ಯೆ: ರಾಮಮಂದಿರ (Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾ ಮೂರ್ತಿ (Ram Lalla Idol) ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬುಧವಾರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸದಾವಕಾಶ ಕಲ್ಪಿಸಿ ಖ್ಯಾತಿ ತಂದುಕೊಟ್ಟ ಅಯೋಧ್ಯೆಗೆ ಶಿಲ್ಪಿ ಧನ್ಯವಾದ ತಿಳಿಸಿದ್ದಾರೆ.
Advertisement
ಹೌದು, ತಾಯ್ನಾಡಿಗೆ ವಾಪಸ್ ಆಗುವ ವೇಳೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ ಅರುಣ್ ಯೋಗಿರಾಜ್ (Arun Yogiraj), ಧನ್ಯವಾದಗಳು ಅಯೋಧ್ಯೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಪೋಸ್ಟ್ ಜೊತೆಗೆ ತಾವು ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೇವಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಿಂದ ತಾಯ್ನಾಡಿಗೆ ಆಗಮನ – ರಾಮಭಕ್ತರಿಂದ ಭವ್ಯ ಸ್ವಾಗತ, ಮೊಳಗಿದ ‘ಜೈ ಶ್ರೀರಾಮ್’ ಘೋಷಣೆ
Advertisement
Thank you Ayodhya ???????????????????????? pic.twitter.com/OXXKs1h5Ri
— Arun Yogiraj (@yogiraj_arun) January 24, 2024
Advertisement
ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ವಿಗ್ರಹವು ಈಗಾಗಲೇ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿದೆ. ಇತರೆ ಇಬ್ಬರು ಸ್ಪರ್ಧಿಗಳು ದೇವಾಲಯದ ಪವಿತ್ರ ಆವರಣದಲ್ಲಿ ಗೌರವ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅವುಗಳಲ್ಲಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿಸಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇತ್ತು. ಈ ವಿಗ್ರಹಗಳು ದೇವಾಲಯದ ‘ಗರ್ಭಗೃಹ’ದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ರಾಮಮಂದಿರದಲ್ಲಿ ಬೇರೆಡೆ ಪೂಜ್ಯ ಸ್ಥಾನವನ್ನು ಪಡೆಯಲಿವೆ.
Advertisement
ಅಯೋಧ್ಯೆಯ ಭವ್ಯ ಮಂದಿರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಮಮಂದಿರ ಗರ್ಭಗುಡಿ ಸೇರಲು ಸ್ಪರ್ಧೆಯಲ್ಲಿದ್ದ 3ನೇ ರಾಮಲಲ್ಲಾ ವಿಗ್ರಹದ ಫೋಟೋ ವೈರಲ್
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ್ದಾರೆ. ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಶಿಲ್ಪಕ್ಕೆ ಬಳಸಲಾದ ನೀಲಿ ಬಣ್ಣದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಹೊರತೆಗೆಯಲಾಗಿತ್ತು. ಸೋಪ್‌ಸ್ಟೋನ್ ಎಂದು ಪ್ರಸಿದ್ಧವಾದ ಆಕಾಶ-ನೀಲಿ ಮೆಟಾಮಾರ್ಫಿಕ್ ಬಂಡೆಯು ವಿಗ್ರಹಗಳನ್ನು ಕೆತ್ತಲು ಶಿಲ್ಪಿಗಳಿಗೆ ಉತ್ತಮ ಆಯ್ಕೆಯಾಗಿದೆ. ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ, ಆರತಿ ಸಮಯ, ಭಗವಾನ್ ರಾಮನಿಗೆ ಅರ್ಪಣೆ ಮತ್ತು ಇತರ ಕಾರ್ಯವಿಧಾನಗಳನ್ನು ದೇವಾಲಯದಲ್ಲಿ ನಿಗದಿಪಡಿಸಲಾಗಿದೆ.