ತೆಲುಗಿನ ನಟ ನಾಗಚೈತನ್ಯ ನಟನೆಯ ‘ತಾಂಡೇಲ್’ (Thandel) ಸಿನಿಮಾ ಇದೇ ಫೆ.7ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ಪತ್ನಿ ಶೋಭಿತಾ (Sobhita Dhulipala) ಪ್ರೀತಿಯಿಂದ ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ ಎಂದು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
Advertisement
‘ತಾಂಡೇಲ್’ ಸಿನಿಮಾದ ಸಾಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ‘ಬುಜ್ಜಿ ತಲ್ಲಿ’ ಹಾಡಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ಸಾಯಿ ಪಲ್ಲವಿಗೆ (Sai Pallavi) ನಾಗಚೈತನ್ಯ (Naga Chaitanya) ಬುಜ್ಜಿ ತಲ್ಲಿ ಎಂದು ಕರೆಯುತ್ತಾರೆ. ಇದೇ ಹೆಸರನ್ನು ಪತ್ನಿಗೂ ಕರೆಯುವ ವಿಚಾರವನ್ನು ಸಂದರ್ಶನದಲ್ಲಿ ನಟ ರಿವೀಲ್ ಮಾಡಿದ್ದಾರೆ.
Advertisement
Advertisement
ಶೋಭಿತಾಗೆ ‘ಬುಜ್ಜಿ ತಲ್ಲಿ’ ಎಂದು ನಟ ಅಡ್ಡ ಹೆಸರು ಇಟ್ಟಿರೋದಾಗಿ ಹೇಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಪತ್ನಿಗೆ ಮುದ್ದಾಗಿ ಏನೆಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.
Advertisement
ಇನ್ನೂ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಶೋಭಿತಾ ಜೊತೆ ಸಿನಿಮಾದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುತ್ತೇವೆ ಎಂದು ನಾಗಚೈತನ್ಯ ತಿಳಿಸಿದ್ದಾರೆ.