ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ನಟನೆಯ ʻವಾರಿಸುʼ (Varisu Film) ಸೂಪರ್ ಸಕ್ಸಸ್ ನಂತರ ಹೊಸ ಚಿತ್ರ `ಲಿಯೋ’ (Liyo) ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೆ `ವಾರಿಸು ಟೀಂ’ ವಿಜಯ್‌ನ ಭೇಟಿ ಮಾಡಿದ್ದಾರೆ. ತಂಡದ ಹೊಸ ಚಿತ್ರಕಥೆಗೆ ದಳಪತಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
`ಬೀಸ್ಟ್’ ಚಿತ್ರ ಸೋಲಿನಿಂದ ಬೇಸತ್ತ ದಳಪತಿ ವಿಜಯ್‌ಗೆ `ವಾರಿಸು’ ಸಿನಿಮಾ ಸಕ್ಸಸ್ ದೊಡ್ಡ ಮಟ್ಟದಲ್ಲಿ ತಿರುವು ನೀಡಿದೆ. ಇದೇ ಖುಷಿಯಲ್ಲಿ ತಮ್ಮ 67ನೇ ಚಿತ್ರ ʻಲಿಯೋʼ ಪ್ರಾಜೆಕ್ಟ್‌ನತ್ತ ವಿಜಯ್ ಮುಖ ಮಾಡಿದ್ದಾರೆ.
Advertisement
Advertisement
`ವಾರಿಸು’ ಸಿನಿಮಾ ಕಥೆ, ವಿಜಯ್ -ರಶ್ಮಿಕಾ ರೊಮ್ಯಾನ್ಸ್, ಸಾಂಗ್ಸ್ ಎಲ್ಲವೂ ತೆರೆಯ ಮೇಲೆ ಕಮಾಲ್ ಮಾಡೋದರಲ್ಲಿ ಗೆದ್ದಿತ್ತು. ಇದೀಗ ಮತ್ತೆ ಈ ಟೀಂ ಒಂದಾಗುತ್ತಿದೆ. ಭಿನ್ನ ಕಥೆಯೊಂದಿಗೆ `ವಾರಿಸು’ ನಿರ್ದೇಶಕ ನಟ ವಿಜಯ್ ಭೇಟಿ ಮಾಡಿ ಕಥೆ ಹೇಳಿದ್ದಾರೆ. ವಿಜಯ್ ಕೂಡ ಕಥೆ ಕೇಳಿ ಥ್ರಿಲ್ ಆಗಿ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
Advertisement
`ಲಿಯೋ’ ಚಿತ್ರ ಮುಗಿಯುತ್ತಿದ್ದಂತೆ `ವಾರಿಸು’ ಟೀಂ ಜೊತೆ ವಿಜಯ್ ಹೊಸ ಸಿನಿಮಾ ಮಾಡಲಿದ್ದಾರೆ. ಮತ್ತೆ ಈ ಚಿತ್ರಕ್ಕೆ ವಿಜಯ್ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Your point of view caught my eye and was very interesting. Thanks. I have a question for you. https://www.binance.com/it/register?ref=53551167