ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಕ್ಸಸ್ ಸಿಗದೆ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಕಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಮ್ಮೆ ಸ್ಟಾರ್ ನಟ ವಿಜಯ್ ದಳಪತಿಗೆ (Vijay Thalapathy) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಅಫಿಷಿಯಲ್ ಆಗಿ ತಿಳಿಸಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ
ವಿಜಯ್ ನಟನೆಯ ಕೊನೆಯ ಸಿನಿಮಾ ‘ದಳಪತಿ 69ನೇ’ (Thalapathy 69) ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಪೂಜಾ ಹೆಗ್ಡೆ ಗಿಟ್ಟಿಸಿಕೊಂಡಿದ್ದಾರೆ.
View this post on Instagram
ಈ ಹಿಂದೆ ಕೂಡ 2022ರಲ್ಲಿ ತೆರೆಕಂಡ ‘ಬೀಸ್ಟ್’ ಚಿತ್ರದಲ್ಲಿ ವಿಜಯ್‌ಗೆ ಪೂಜಾ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಈಗ ಮತ್ತೆ ವಿಜಯ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇನ್ನೂ ಬಾಬಿ ಡಿಯೋಲ್ (Bobby Deol) ಕೂಡ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.
ಅಂದಹಾಗೆ, ಶಾಹಿದ್ ಕಪೂರ್ ಜೊತೆ ‘ದೇವ’, ಸೂರ್ಯ 44, ಅಹಾನ್ ಶೆಟ್ಟಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.