– ರೊಚ್ಚಿಗೆದ್ದ ಪ್ರಾಣಿಪ್ರಿಯರು
ಬ್ಯಾಂಕಾಕ್: 7 ವರ್ಷದ ಕಂದಮ್ಮನಿಗೆ ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಸಾಕು ನಾಯಿಯನ್ನೇ ಕೊಂದು ತಿಂದ ವಿಚಿತ್ರ ಘಟನೆಯೊಂದು ಥೈಲಾಂಡ್‌ನಲ್ಲಿ (Thailand), ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ವ್ಯಕ್ತಿಯನ್ನು 42 ವರ್ಷದ ಸಾಂಗ್‌ವುಟ್ ಚುಥಾಂಗ್ ಎಂದು ಗುತಿಸಲಾಗಿದೆ. ಈ ಘಟನೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯದಲ್ಲೇನಿದೆ..?: ಸಾಂಗ್‌ವುಟ್ ತನ್ನ 10 ವರ್ಷದ ಸಾಕು ನಾಯಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಮರಕ್ಕೆ ನೇತು ಹಾಕುವ ಮೂಲಕ ನರಳಿ ನರಳಿ ಸಾಯುವಂತೆ ಮಾಡಿದ್ದಾನೆ. ಶ್ವಾನ ಸತ್ತ ಬಳಿಕ ಅದರ ದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸಾಂಗ್‌ವುಟ್ ಈ ಕೃತ್ಯವನ್ನು ತನ್ನ 7 ವರ್ಷದ ಸೋದರಳಿಯನ ಮುಂದೆಯೇ ಎಸಗಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಸಾಂಗ್‌ವುಟ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಳಿಕ ತನಿಖೆಯ ವೇಳೆ ಶ್ವಾನವನ್ನು ಕೊಂದ ಬಗ್ಗೆ ಬಾಯಿಬಿಟ್ಟಿದ್ದಾನೆ. ಆದರೆ ಹತ್ಯೆ ಮಾಡಿ ಬಳಿಕ ಏನು ಮಾಡಿದ್ದಾನೆ ಎಂಬುದನ್ನು ಪೊಲೀಸರ ಮುಂದೆ ಹೇಳಲು ನಿರಾಕರಿಸಿದ್ದಾನೆ. ಹೆಚ್ಚಿನ ತನಿಖೆ ನಡೆಸಿದಾಗ ಸಾಂಗ್‌ವುಟ್ ಸತ್ಯ ಕಕ್ಕಿದ್ದಾನೆ. ನಾಯಿಯನ್ನು ತಿಂದು ಅದರ ಮಾಂಸವನ್ನು ರೋಜ್ ಎಂಬ ಸ್ನೇಹಿತನೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾನೆ. ಇತ್ತ ಪ್ರಕರಣ ಸಂಬಂಧ ಸಾಂಗ್‌ವುಟ್ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್‌ನಲ್ಲಿ ನಾಯಿ ಮಾಂಸ ಪತ್ತೆಯಾಗಿದೆ. ಇದನ್ನೂ ಓದಿ: ಮದ್ಯ ಕುಡಿಸಿ ವಿದ್ಯಾರ್ಥಿಯೊಂದಿಗೆ ಸೆಕ್ಸ್ – ಪಾಠ ಹೇಳಿಕೊಡಲು ಹೋದ ಶಿಕ್ಷಕಿ ಹೀಗೆ ಮಾಡೋದಾ?
ಥಾಯ್ ಪೊಲೀಸರು ಸಾಂಗ್‌ವುಟ್‌ನ ಸ್ನೇಹಿತ ರೋಜ್‌ನನ್ನು ಸಹ ಬಂಧಿಸಿದ್ದಾರೆ. ಅವರಿಬ್ಬರಿಗೂ ಥಾಯ್ಲೆಂಡ್‌ನ ಕ್ರಿಮಿನಲ್ ಕಾನೂನಿನ ಸೆಕ್ಷನ್ 340 (ಅಪರಾಧಕ್ಕೆ ಸಹಾಯ ಮಾಡಲು ವಾಹನವನ್ನು ಬಳಸುವುದು) ಮತ್ತು ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ಶವಗಳನ್ನು ತ್ಯಜಿಸುವುದು) ಜೊತೆಗೆ ಸೆಕ್ಷನ್ 20 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಪ್ರಾಣಿಪ್ರಿಯರು ಸಾಂಗ್‌ವುಟ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.