ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಗಡಿಯಲ್ಲಿ ಘರ್ಷಣೆ!

Public TV
3 Min Read
Thailand Cambodia clash over the 11th century Preah Vihear Shiva temple Borders shut F 16 deployed civilians killed 1

ಬ್ಯಾಂಕಾಕ್‌: ಶಿವನ ದೇವಸ್ಥಾನದ (Shiva Temple) ವಿಚಾರದ ಬಗ್ಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ (Thailand-Cambodia Clash) ಮಧ್ಯೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿದ್ದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

ಬುಧವಾರ ದಟ್ಟವಾದ ಅರಣ್ಯದಿಂದ ಕೂಡಿದ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ (Drone) ಪತ್ತೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿತ್ತು. ಇದಾದ ಸ್ವಲ್ಪ ಸಮಯದ ನಂತರ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್‌ ಸೈನಿಕರು ಗಾಯಗೊಂಡಿದ್ದು ಈಗ ಗಲಾಟೆಗೆ ಮೂಲ ಕಾರಣ. ಈ ನೆಲ ಬಾಂಬ್‌ ಅನ್ನು ಕಾಂಬೋಡಿಯಾ ಇಟ್ಟಿತ್ತು ಎಂದು ಥಾಯ್ಲೆಂಡ್‌ ದೂರಿದೆ.

ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಬೆನ್ನಲ್ಲೇ ಎರಡೂ ದೇಶಗಳು ರಾಯಭಾರಿಗಳನ್ನು ಹೊರ ಹಾಕಿವೆ. ನಂತರ ಥಾಯ್ಲೆಂಡ್‌ ಕಾಂಬೋಡಿಯಾದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾದ ಫಿರಂಗಿ ಗುಂಡಿನ ದಾಳಿ ನಡೆಸಿದೆ. ಎರಡು ದೇಶಗಳು ಗಡಿಯನ್ನು ಮುಚ್ಚಿದ್ದು ತನ್ನ ದೇಶದ ಜನರು ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಮುಂಬೈ ದಾಳಿಯ ರುವಾರಿ, ಸಂಸತ್‌ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು

ಕಾಂಬೋಡಿಯಾದ ದಾಳಿಯಿಂದ ಒಂಬತ್ತು ಥಾಯ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಥಾಯ್ ಅಧಿಕಾರಿಗಳು ಹೇಳಿದಾರೆ. ಇದಕ್ಕೆ ಪ್ರತಿಯಾಗಿ ಥಾಯ್ ಸೈನ್ಯವು ಕಾಂಬೋಡಿಯನ್ ಪಡೆಗಳ ಮೇಲೆ BM-21 ರಾಕೆಟ್‌ಗಳನ್ನು ಹಾರಿಸಿವೆ. ಅಷ್ಟೇ ಅಲ್ಲದೇ ಎಫ್‌ 16 ಯುದ್ಧ ವಿಮಾನದ ಮೂಲಕ ಏರ್‌ ಸ್ಟ್ರೈಕ್‌ ಮಾಡಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ 800 ಕಿಮೀ ಗಡಿಯಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ.


ಏನಿದು ದೇವಸ್ಥಾನ ವಿವಾದ?
ಖಮೇರ್ ರಾಜವಂಶದ ಒಂದನೇ ಸೂರ್ಯವರ್ಮ 11ನೇ ಶತಮಾನದಲ್ಲಿ ಶಿವನ ದೇವಸ್ಥಾನ ಕಟ್ಟಿಸಿದ್ದಾನೆ. ಈ ದೇವಸ್ಥಾನ ಎರಡೂ ದೇಶಗಳ ಗಡಿಯಲ್ಲಿದೆ. ಈ ದೇವಸ್ಥಾನ ಯಾವ ದೇಶಕ್ಕೆ ಸೇರಬೇಕು ಎನ್ನುವ ವಿಚಾರಕ್ಕೆ ಈಗ ಕಿತ್ತಾಟ ನಡೆಯುತ್ತಿದೆ. ವಿಶೇಷ ಏನೆಂದರೆ ಈ ಎರಡೂ ದೇಶಗಳ ಬೌದ್ಧ ಧರ್ಮದ ದೇಶಗಳಾಗಿದ್ದು, 95% ಹೆಚ್ಚು ಬೌದ್ಧರೇ ನೆಲೆಸಿದ್ದಾರೆ.

ಈ ದೇವಾಲಯಗಳು ಖಮೇರ್ ಸಾಮ್ರಾಜ್ಯದ ಐತಿಹಾಸಿಕ ಗಡಿಯೊಳಗೆ ಬರುತ್ತವೆ ಎಂದು ಕಾಂಬೋಡಿಯಾ ಹೇಳಿದರೆ ಥಾಯ್ಲೆಂಡ್‌ ವಸಾಹತುಶಾಹಿ ಯುಗದ ನಕ್ಷೆಗಳನ್ನು ಉಲ್ಲೇಖಿಸುತ್ತದೆ ಮತ್ತು ದೇವಾಲಯಗಳು ತನ್ನ ಪ್ರದೇಶದೊಳಗೆ ಇವೆ ಎಂದು ಥಾಯ್ಲೆಂಡ್‌ ಪ್ರತಿಪಾದಿಸುತ್ತಿದೆ. ಈ ದೇವಸ್ಥಾನವನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂದು ಕಾಂಬೋಡಿಯಾ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಥಾಯ್ಲೆಂಡ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಭಾರತಕ್ಕೆ ಏನು ಲಾಭ?

ಬೌದ್ಧ ಕೇಂದ್ರಗಳಾಗಿ ಹೇಗೆ ಮಾರ್ಪಟ್ಟವು?
ಮೂಲತಃ ಶೈವ ಹಿಂದೂ ಪೂಜೆಗಾಗಿ ನಿರ್ಮಿಸಲ್ಪಟ್ಟಿದ್ದರೂ, ಖಮೇರ್ ಸಾಮ್ರಾಜ್ಯವು ಮಹಾಯಾನ ಬೌದ್ಧಧರ್ಮವನ್ನು ಸ್ವೀಕರಿಸಿದಂತೆ ದೇವಾಲಯಗಳನ್ನು ಕ್ರಮೇಣ ಬೌದ್ಧ ಬಳಕೆಗೆ ಬಳಸಲಾಯಿತು. ರಾಜ ಜಯವರ್ಮನ್ VII ರ ಅಡಿಯಲ್ಲಿ, ಧರ್ಮ ಸಲಾಸ್ (ವಿಶ್ರಾಂತಿ ಗೃಹಗಳು) ನಂತಹ ಹೆಚ್ಚುವರಿ ರಚನೆಗಳನ್ನು ಸೇರಿಸಲಾಯಿತು.

Share This Article