ಬಾಲಿವುಡ್ ಖ್ಯಾತ ನಟಿ ದಿಶಾ ಪಟಾನಿ ಬೇಸಿಗೆ ರಜೆ ಕಳೆಯುವುದಕ್ಕಾಗಿ ಥೈಲ್ಯಾಂಡ್ (Thailand) ಗೆ ಹಾರಿದ್ದಾರೆ. ಬಿಕಿನಿಲ್ಲಿ (Bikini) ಹಾಟ್ ಬೆಡಗಿ ಪೋಸ್ ನೀಡಿ, ಹುಡುಗರ ನಿದ್ದೆ ಕೆಡಿಸಿದ್ದಾರೆ. ಸ್ಟುಡಿಯೋ ರೂಮ್ ಒಳಗೆ ಹಾಟ್ ಫೋಟೋಗೆ ಪೋಸ್ ಕೊಡುತ್ತಿದ್ದವರು ಈ ಬಾರಿ ಬೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ದಿಶಾ ಪಟಾನಿ (Disha Patani) ಅವರು ಸದಾ ಟ್ರೋಲ್‌ಗಳ ಮೂಲಕ ಸದ್ದು ಮಾಡ್ತಿರುತ್ತಾರೆ. ಕಳೆದ ಬಾರಿ ಫೇಸ್ ಸರ್ಜರಿ ವಿಷ್ಯವಾಗಿ ನಟಿ ಭಾರಿ ಟ್ರೋಲ್ ಆಗಿದ್ದರು. ನಂತರ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದರು.
ಭಾಘಿ 2, ಭಾಘಿ 3, ರಾಧೆ (Radhe) ಸಿನಿಮಾಗಳಲ್ಲಿ ನಟಿಸಿರುವ ದಿಶಾ ಪಟಾನಿ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸದಾ ಬೋಲ್ಡ್ ಫೋಟೋಶೂಟ್‌ನಿಂದಲೇ ನಟಿಮಣಿ ದಿಶಾ ಸಂಚಲನ ಸೃಷ್ಟಿಸಿದ್ದರು.
ಸದ್ಯ ದಿಶಾ ಸದ್ಯ ‘ಕಂಗುವ’ (Kanguva) ಸಿನಿಮಾದಲ್ಲಿ ನಟಿಸಿದ್ದಾರೆ. 10 ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ತಮಿಳಿನ ಸ್ಟಾರ್ ನಟ ಸೂರ್ಯಗೆ (Suriya) ಜೋಡಿಯಾಗಿ ದಿಶಾ ಕಾಣಿಸಿಕೊಂಡಿದ್ದಾರೆ. ಸಕ್ಸಸ್ ಸಿಗದೇ ಬೆಸತ್ತಿರೋ ದಿಶಾಗೆ, ಈ ಚಿತ್ರ ಯಶಸ್ಸು ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.