ಥೈಲ್ಯಾಂಡ್: 11 ಜನರನ್ನು ಮದುವೆಯಾಗಿ ಯಾಮಾರಿಸಿ ಅವರ ಹಣದೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, 32 ವರ್ಷದ ಜರಿಯಪೋರ್ನ್ ನುಯಾಯ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯನ್ನು ಸೆ.7ರಂದು ಥಾಯ್ಲೆಂಡ್ ಪೊಲೀಸರು ನಖೋನ್ ಪಾಥೊಮ್ ಪ್ರಾಂತ್ಯದ ಸ್ಯಾಮ್ ಫ್ರಾನ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?: ಥೈಲ್ಯಾಂಡ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಪ್ರತಿ ಪುರುಷ ಭಾವಿ ಪತ್ನಿಗೆ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಈಕೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಡಾಲರ್ (38 ಸಾವಿರದಿಂದ- 1.9 ಲಕ್ಷ ರೂ.) ವಧುದಕ್ಷಿಣೆ ಪಡೆದು ಪರಾರಿಯಾಗಿದ್ದಳು.
Advertisement
Advertisement
ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಆ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾಳೆ. ಆ ನಂತ್ರ ಆತನನ್ನು ಮದುವೆಯಾಗುತ್ತಾಳೆ. ಆ ಬಳಿಕ ವಧು ದಕ್ಷಿಣೆಯೊಂದಿಗೆ ಅಲ್ಲಿಂದ ಕಾಲ್ಕೀಳುತ್ತಾಳೆ.
Advertisement
ಈಕೆಯ ಚಾಣಾಕ್ಷತನ ಎಷ್ಟಿದೆ ಅಂದ್ರೆ ಅಗಸ್ಟ್ ಒಂದೇ ತಿಂಗಳಿನಲ್ಲಿ ಈಕೆ ನಾಲ್ವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ 11 ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ಇಲ್ಲಿನ ಸ್ಥಳೀಯ ಪತ್ರಿಕೆ ತಿಳಿಸಿದ್ದಾರೆ. ಇದೇ ರೀತಿ ಮೋಸ ಹೋದ ವ್ಯಕ್ತಿಯೊಬ್ಬರು ಈಕೆಯ ಬಗ್ಗೆ ಎಚ್ಚರವಾಗಿರಿ ಎಂದು ಫೇಸ್‍ಬುಕ್ ಪೋಸ್ಟ್ ಹಾಕುವವರೆಗೆ ಮೋಸ ಹೋದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪೋಸ್ಟ್ ನೋಡಿದ ನಂತರ ಪೊಲೀಸರ ಬಳಿ ಹೋಗಿ ಹೇಗೆ ಮೋಸ ಹೋದ್ರು ಅನ್ನೋದನ್ನ ಹೇಳಿಕೊಂಡಿದ್ದಾರೆ.
ಕಳೆದ ಎರಡು ವರ್ಷದಿಂದ ಈಕೆಯ ವಿರುದ್ಧ 4 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು.
ಸದ್ಯ ಮೋಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿ ಕಿಮಿನಲ್ ಕೋಡ್‍ನ ಸೆಕ್ಷನ್ 342 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.