ಚಿಯಾಂಗ್ ರಾಯ್: 17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಓದಿ: ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್ ಸೇರಿದಂತೆ ಅನೇಕ ನುರಿತ ತಜ್ಞರ ತಂಡಕ್ಕೆ ವಿಶ್ವದ ನಾಯಕರಿಂದ ಪ್ರಶಂಸನೆ ಕೇಳಿ ಬರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 17 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
On behalf of the United States, congratulations to the Thai Navy SEALs and all on the successful rescue of the 12 boys and their coach from the treacherous cave in Thailand. Such a beautiful moment – all freed, great job!
— Donald J. Trump (@realDonaldTrump) July 10, 2018
ಪಾರಾದ ಎಲ್ಲ ಮಕ್ಕಳು ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ ಸಿಕ್ಕಿದೆ. ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕು ಮುನ್ನ ಈ ಮಕ್ಕಳು ಗುಹೆಯಿಂದ ಪಾರಾದರೆ ಅವರಿಗೆ ಈ ಪಂದ್ಯದ ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫಿಫಾ ಅಧ್ಯಕ್ಷರು ಈ ಹಿಂದೆ ಪ್ರಕಟಿಸಿದ್ದರು.