ವಾಷಿಂಗ್ಟನ್: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ನೀಡದ ಆಫರ್ ಅನ್ನು ಯುವಕನೊಬ್ಬ ತಿರಸ್ಕರಿಸಿ ಸುದ್ದಿಯಾಗಿದ್ದಾನೆ.
ಜ್ಯಾಕ್ ಸ್ವೀನಿ ಎನ್ನುವ 19 ವರ್ಷದ ಯುವಕ ಮಸ್ಕ್ ಅವರ ಖಾಸಗಿ ವಿಮಾನವನ್ನು ಟ್ರ್ಯಾಕ್ ಮಾಡಿ @ElonJet ಹ್ಯಾಂಡಲ್ ಮೂಲಕ ಟ್ವೀಟ್ ಮಾಡುತ್ತಿದ್ದಾನೆ. ತನ್ನ ಜೆಟ್‍ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಮಸ್ಕ್ ಯುವಕನಿಗೆ ರೂ 5,000 (ಸುಮಾರು ರೂ. 3.75 ಲಕ್ಷ) ಆಫರ್ ಮಾಡಿದ್ದಾರೆ.
Advertisement
Advertisement
ಆದರೆ ಸ್ವೀನಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಪ್ರತಿಯಾಗಿ ರೂ 50,000 (ಸುಮಾರು ರೂ. 37.55 ಲಕ್ಷ) ಬೇಡಿಕೆಯಿಟ್ಟಿದ್ದಾನೆ. ಈ ಮೊತ್ತವು ತನ್ನ ಶಾಲಾ ಶುಲ್ಕವನ್ನು ಭರಿಸುತ್ತದೆ ಮತ್ತು ಟೆಸ್ಲಾ ಕಾರು ಖರೀದಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ
Advertisement
ಪ್ರತಿ ಬಾರಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗನ್ನು ಟ್ರ್ಯಾಕ್ ಮಾಡಲು ಯುವಕ ಪ್ರೋಗ್ರಾಮ್ ರಚಿಸಿದ್ದಾನೆ. ಸ್ವೀನಿ ಮಸ್ಕ್‌ನ ಖಾಸಗಿ ಜೆಟ್‍ಗಳನ್ನು ಮಾತ್ರವಲ್ಲದೆ ಬಿಲ್ ಗೇಟ್ಸ್ ಮತ್ತು ಜೆಫ್ ಬೆಜೋಸ್ ಸೇರಿದಂತೆ ಉನ್ನತ ಮಟ್ಟದ ಜನರನ್ನೂ ಸಹ ಟ್ರ್ಯಾಕ್ ಮಾಡುತ್ತಿದ್ದಾನೆ. ಇದನ್ನೂ ಓದಿ: ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು