– ಬಾಂಗ್ಲಾದೊಂದಿಗೆ ತ್ರಿಪುರಾ ರಾಜ್ಯ ಗಡಿ ಹಂಚಿಕೊಂಡಿದೆ
ಅಗರ್ತಲಾ: ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಪ್ರಧಾನಿಯಾಗಿದ್ದಾಗ ಜೈಲಿನಲ್ಲಿದ್ದ ಅನೇಕ ಭಯೋತ್ಪಾದಕರು ಈಗ ಬಿಡುಗಡೆಯಾಗಿದ್ದಾರೆ. ಭಾರತದ ತ್ರಿಪುರಾ ರಾಜ್ಯ ಬಾಂಗ್ಲಾದೇಶದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ (Manik Saha) ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ ಸಹಾ ಅವರು ಬಾಂಗ್ಲಾದೇಶದ ಪ್ರಸ್ತುತ ಸರ್ಕಾರವನ್ನು ಟೀಕಿಸಿದರು. ಅಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ʻಇವಿಎಂ ಹ್ಯಾಕ್ ಮಾಡಬಹುದುʼ – ವಿಡಿಯೋ ಹರಿಬಿಟ್ಟವನ ವಿರುದ್ಧ ಎಫ್‌ಐಆರ್
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ, ಅಲ್ಲಿನ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ? ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಬರುತ್ತಿರುವ ಸುದ್ದಿಗಳು ಒಳ್ಳೆಯದಲ್ಲ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.
ಆಗ ಶೇಖ್ ಹಸೀನಾ ಸರ್ಕಾರದ ಅವಧಿಯಲ್ಲಿ ಜೈಲು ಸೇರಿದ್ದ ಭಯೋತ್ಪಾದಕರು ಈಗ ಮುಕ್ತರಾಗಿದ್ದಾರೆ. ಅವರು ಈಗ ಎಲ್ಲಿದ್ದಾರೆ? ಅವರ ಇರುವಿಕೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ವಿಶೇಷವಾಗಿ ತ್ರಿಪುರಾ, ಬಾಂಗ್ಲಾದೇಶದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಭಯೋತ್ಪಾದಕರು ಈಗ ಎಲ್ಲಿದ್ದಾರೆ ಮತ್ತು ಅವರ ಚಟುವಟಿಕೆ ಏನು ಎಂಬುದನ್ನು ಅವರು ಪರಿಶೀಲಿಸಬೇಕು. ಈಗಿನ ಸರ್ಕಾರವು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫೆಂಗಲ್ ಚಂಡಮಾರುತ | ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ – ವಿಡಿಯೋ ವೈರಲ್
ಭಾರತ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅಂತಿಮವಾಗಿ ಭಾರತವಿಲ್ಲದೆ ಬಾಂಗ್ಲಾದೇಶದ ಅಸ್ತಿತ್ವವು ಸಾಧ್ಯವಿಲ್ಲ. ಆದ್ದರಿಂದ ಅವರೂ ಈ ಬಗ್ಗೆ ಯೋಚಿಸಬೇಕು. ಅವರ ಜಿಡಿಪಿ ಈ ಹಿಂದೆ ಏರಿಕೆ ಕಂಡಿತ್ತು. ಆದರೆ, ಈಗ ಕುಸಿಯುತ್ತಿದೆ ಎಂದು ಎಚ್ಚರಿಸಿದ್ದಾರೆ.